ಕರ್ನಾಟಕ

karnataka

ETV Bharat / bharat

ನಾಳೆ ಇಲ್ಲವೇ ನಾಡಿದ್ದು ಕೇರಳಕ್ಕೆ ಮಾನ್ಸೂನ್​ ಪ್ರವೇಶ.. ಹವಾಮಾನ ಇಲಾಖೆ ಮುನ್ಸೂಚನೆ - ಜೂನ್​​ 7 ಅಥವಾ 8ರ ವೇಳೆಗೆ ಮುಂಗಾರು

ಪ್ರಸ್ತುತ ಇಡೀ ದೇಶವೇ ಮುಂಗಾರು ಮಳೆಗಾಗಿ ಕಾಯುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೇರಳಕ್ಕೆ ಮುಂಗಾರು ಮೊದಲು ಅಪ್ಪಳಿಸಲಿದೆ. ಆದರೆ, ಈ ಬಾರಿ ಮುಂಗಾರು ನಿರೀಕ್ಷಿತ ಸಮಯಕ್ಕಿಂತ ವಿಳಂಬವಾಗಿದೆ. ಜೂನ್ 1 ರಿಂದ ಜೂನ್ 4 ರ ನಡುವೆ ಕೇರಳದ ಕರಾವಳಿಯನ್ನು ತಲುಪುವ ಭರವಸೆಯನ್ನು ಹವಾಮಾನ ಇಲಾಖೆ ಈ ಹಿಂದೆ ವ್ಯಕ್ತಪಡಿಸಿತ್ತು. ಈಗ ಹವಾಮಾನ ಇಲಾಖೆ ನಾಳೆ ಅಥವಾ ನಾಡಿದ್ದು ಅಂದರೆ ಬುಧವಾರ ಅಥವಾ ಗುರುವಾರ ಅಪ್ಪಳಿಸಬಹುದು ಎಂದು ಹೇಳುತ್ತಿದೆ.

ನಾಳೆ ಇಲ್ಲವೇ ನಾಡಿದ್ದು ಕೇರಳಕ್ಕೆ ಮಾನ್ಸೂನ್​ ಪ್ರವೇಶ.. ಹವಾಮಾನ ಇಲಾಖೆ ಮುನ್ಸೂಚನೆ
Monsoon Arrival Further Delayed

By

Published : Jun 6, 2023, 10:02 AM IST

ನವದೆಹಲಿ: ಜೂನ್​​ 7 ಅಥವಾ 8ರ ವೇಳೆಗೆ ಮುಂಗಾರು ಕೇರಳಕ್ಕೆ ಅಪ್ಪಳಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈಋತ್ಯ ಮಾನ್ಸೂನ್‌ ಉತ್ತರದ ಗಡಿ ಲಕ್ಷದ್ವೀಪದ ದ್ವೀಪ ಪ್ರದೇಶ ಮಿನಿಕೋಯ್ ಮೂಲಕ ಹಾದುಹೋಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ದಕ್ಷಿಣ ಅರಬ್ಬಿ ಸಮುದ್ರದ ಮೇಲೆ ಪಶ್ಚಿಮ ಮಾರುತಗಳು ಕೇಂದ್ರಿಕೃತವಾಗುವುದಿಂದ ಮಳೆ ಬೀಳಲು ಅನುಕೂಲಕರ ಪರಿಸ್ಥಿತಿಗಳನ್ನ ನಿರ್ಮಾಣ ಮಾಡಲಿದೆ. ಇದರೊಂದಿಗೆ, ಪಶ್ಚಿಮ ಮಾರುತಗಳ ಆಳವು ಕ್ರಮೇಣ ಹೆಚ್ಚುತ್ತಾ ಸಾಗುತ್ತದೆ. ಆಗ್ನೇಯ ಅರಬ್ಬಿ ಸಮುದ್ರದ ಮೇಲೂ ಮೋಡದ ಪ್ರಮಾಣ ಹೆಚ್ಚುತ್ತಿದ್ದು. ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಮಾನ್ಸೂನ್‌ನ ಆರಂಭಕ್ಕೆ ಈ ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣ ಆಗಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಐಎಂಡಿ ಹೇಳಿದೆ.

ಮಾನ್ಸೂನ್​ ಮಾರುತಗಳು ಕೇರಳ ತಲುಪಿದ ನಂತರ, ಕರ್ನಾಟಕ, ತಮಿಳುನಾಡು ಮತ್ತು ಈಶಾನ್ಯದ ಭಾಗಗಳಿಗೆ ಚಲಿಸುತ್ತದೆ. ಕೋಲ್ಕತ್ತಾದ ಮಾಧ್ಯಮ ವರದಿಗಳ ಪ್ರಕಾರ, ಅಲ್ಲಿನ ಹವಾಮಾನ ತಜ್ಞರು ಅಂದಾಜಿಸಿದಂತೆ ಕೇರಳಕ್ಕೆ ತಲುಪುವ ಮಾನ್ಸೂನ್​ ಮಾರುತಗಳು ಮುಂಗಾರು ಚುರುಕುಗೊಳಿಸಲಿದೆ. ಅಲ್ಲಿಂದ ಆ ಮಾರುತಗಳು ಕರ್ನಾಟಕ, ತಮಿಳುನಾಡು ಮತ್ತು ಈಶಾನ್ಯದ ಭಾಗಗಳನ್ನು ಪ್ರವೇಶಿಸಿಲಿದೆ.

ಮಾನ್ಸೂನ್ ಈಶಾನ್ಯಕ್ಕೆ ತಲುಪಿದ ನಂತರವೇ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಮಾನ್ಸೂನ್ ಆಗಮನದ ಸಂಭವನೀಯ ದಿನಾಂಕ ಸ್ಪಷ್ಟವಾಗಲಿದೆ. ಈಶಾನ್ಯದಿಂದ ಮಾನ್ಸೂನ್ ಕೋಲ್ಕತ್ತಾವನ್ನು ತಲುಪಲು ನಾಲ್ಕರಿಂದ ಐದು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನು ಓದಿ:ಚಾರಣದ ವೇಳೆ ಹಿಮಚ್ಛಾದಿತ ಪರ್ವತದಲ್ಲಿ ಸಿಕ್ಕಿಬಿದ್ದ ಕರ್ನಾಟಕದ ಮಹಿಳೆ: 6 ಗಂಟೆಯ ಕಾರ್ಯಾಚರಣೆ ಮೂಲಕ ರಕ್ಷಣೆ

ಚಂಡಮಾರುತದ ಪರಿಚಲನೆಯಿಂದಾಗಿ ಮಾನ್ಸೂನ್ ಕೇರಳ ಕರಾವಳಿಯತ್ತ ಚಲಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ಅರಬ್ಬಿ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶ ಉಂಟಾಗುವುದರಿಂದ ಈ ಚಂಡಮಾರುತವಾಗಿ ರೂಪುಗೊಳ್ಳುತ್ತಿದೆ. ಏತನ್ಮಧ್ಯೆ, ಜೂನ್ 5 ರ ಸುಮಾರಿಗೆ ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತದ ಪರಿಚಲನೆ ಅಭಿವೃದ್ಧಿಗೊಂಡಿದೆ. ಇದು ಮಂಗಳವಾರ ಈ ಪ್ರದೇಶದ ಮೇಲೆ ಕಡಿಮೆ ಒತ್ತಡದ ಪ್ರದೇಶವನ್ನು ರೂಪಿಸುವ ಸಾಧ್ಯತೆ ಇದೆ. ಈ ಮೂಲಕ ಕೇರಳದಲ್ಲಿ ಶುಕ್ರವಾರ (ಜೂನ್ 9) ವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೇರಳಕ್ಕೆ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ನೀಡಿದೆ.

ಕೇರಳದ ಕರಾವಳಿಯಲ್ಲಿ ಬಿರುಗಾಳಿ ಸಹಿತ ಮಳೆ ಬೀಳುವ ಸಾಧ್ಯತೆಯಿದ್ದು, ಮುಂದಿನ 4-5 ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ

ಇದನ್ನು ಓದಿ:ಕುಸಿದು ಬಿತ್ತು ನಿರ್ಮಾಣ ಹಂತದ ಬೃಹತ್​ ಸೇತುವೆ : ವಿಡಿಯೋ

ABOUT THE AUTHOR

...view details