ಕರೀಂನಗರ(ತೆಲಂಗಾಣ):ಮಾಟ - ಮಂತ್ರದ ಸಹಾಯದಿಂದ ವ್ಯಕ್ತಿಯೊಬ್ಬನ ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದ ಡೋಂಗಿ ಬಾಬಾ ಒಬ್ಬ ಇದೀಗ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ವ್ಯಕ್ತಿಗೆ ಮರುಜನ್ಮ ನೀಡುವ ಭರವಸೆ ನೀಡಿ, ಈ ರೀತಿಯಾಗಿ ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ.
'ಕೊಂದಿದ್ದು ನಾನೇ..ಬದುಕಿಸೋದು ನಾನೇ'..ಹೆಣದ ಮುಂದೆ ನಡೀತು ದಿನವಿಡೀ ಪೂಜೆ!! ಜಗ್ತಿಯಲ್ ಜಿಲ್ಲೆಯ ಟಿಆರ್ ನಗರ ನಿವಾಸಿ ರಮೇಶ್ ಮಾಟ - ಮಂತ್ರಕ್ಕೆ ಬಲಿಯಾಗಿದ್ದಾನೆ. ಪುಲ್ಲಯ್ಯ ಎಂಬ ವ್ಯಕ್ತಿ ಮಾಟ - ಮಂತ್ರ ಮಾಡಿ ಆತನ ಕೊಲೆ ಮಾಡಿದ್ದಾನೆ ಎಂದು ಮೃತ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಇದನ್ನೂ ಓದಿರಿ: ಬೆಂದುಹೋದ ಪ್ರೀತಿ.. ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆ..
ಸಾವನ್ನಪ್ಪಿರುವ ರಮೇಶ್ ದೇಹದ ಮೇಲೆ ಪುಲ್ಲಯ್ಯ ಬೆಳಗ್ಗೆಯಿಂದಲೂ ಪೂಜೆ ಮಾಡುತ್ತಲೇ ಇದ್ದನು. ಆದರೆ, ಸಂಜೆಯಾದರೂ ಆತನಿಗೆ ಜೀವ ಬಂದಿರಲಿಲ್ಲ. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಗ್ಟೇಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮಂತ್ರವಾದಿ ಪುಲ್ಲಯ್ಯನನ್ನು ವಿಚಾರಣೆಗೊಳಪಡಿಸಿದಾಗ ರಮೇಶ್ಗೆ ಮರುಜನ್ಮ ನೀಡುವ ಭರವಸೆ ನೀಡಿ, ಆತನನ್ನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಘಟನೆಯಿಂದ ಆಕ್ರೋಶಗೊಂಡಿರುವ ರಮೇಶ್ ಕುಟುಂಬ ಸದಸ್ಯರು, ಕರೀಂನಗರ ಹೆದ್ದಾರಿಯಲ್ಲಿ ಪುಲ್ಲಯ್ಯ ವಿರುದ್ಧ ಪ್ರತಿಭಟನೆ ನಡೆಸಿ, ಆತನ ಮನೆಯ ಮೇಲೆ ದಾಳಿ ಮಾಡಿ ಪೀಠೋಪಕರಣ ಧ್ವಂಸ ಮಾಡಿದ್ದಾರೆ.