ಇಡುಕ್ಕಿ (ಕೇರಳ): ಕೋವಿಡ್ ಪ್ರೋಟೋಕಾಲ್ ಉಲ್ಲಂಘಿಸಿ ಪ್ರಾರ್ಥನಾ ಸಭೆ ನಡೆಸಿರುವ ಪರಿಣಾಮ 100ಕ್ಕೂ ಅಧಿಕ ಜನರಿಗೆ ಇದೀಗ ಕೋವಿಡ್ ಮಹಾಮಾರಿ ತಗುಲಿದ್ದು, ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 80 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೇರಳದ ಇಡುಕ್ಕಿಯಲ್ಲಿ ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್ಐ)ದ ಪಾದ್ರಿಗಳು ಈ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿದ್ದರು. 480ಕ್ಕೂ ಹೆಚ್ಚು ಪಾದ್ರಿಗಳು ಭಾಗವಹಿಸಿದ್ದರಿಂದ ಇದೀಗ ಪ್ರಕರಣ ಸಹ ದಾಖಲು ಮಾಡಲಾಗಿದೆ. ಇದರ ನೇತೃತ್ವವನ್ನ ಬಿಷಪ್ ಧರ್ಮರಾಜ್ ವಹಿಸಿದ್ದರು ಎಂದು ತಿಳಿದು ಬಂದಿದೆ. ಸಭೆಯಲ್ಲಿ ಭಾಗಿಯಾಗಿದ್ದ ಫ್ರಾ. ಬಿಜುಮನ್ (52), ಶೈನ್ ಬಿ. ರಾಜ್(43) ಕೋವಿಡ್ಗೆ ಬಲಿಯಾಗಿದ್ದಾರೆ.