ಕರ್ನಾಟಕ

karnataka

ETV Bharat / bharat

ಯಾರಾಗಲಿದ್ದಾರೆ ಹಿಮಾಚಲದ ಸಿಎಂ?: ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್​ ಈ ಬಗ್ಗೆ ಹೇಳಿದ್ದೇನು?

ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್​ಗೆ ಸಿಎಂ ಯಾರಾಗುತ್ತಾರೆ ಎಂದು ಕೇಳಿದ್ದಕ್ಕೆ ಸಂಚಲನ ಮೂಡಿಸುವ ಹೇಳಿಕೆಯೊಂದನ್ನು ನೀಡಿದ್ದಾರೆ. ವೀರಭದ್ರ ಸಿಂಗ್ ಹೆಸರಿನಲ್ಲಿ ಚುನಾವಣೆ ಎದುರಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಇಷ್ಟು ಸ್ಥಾನ ಸಿಕ್ಕಿದೆ ಎಂದು ಹೇಳಿದ್ದಾರೆ.

Himachal race for chief minister post
ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್​

By

Published : Dec 9, 2022, 1:17 PM IST

ಶಿಮ್ಲಾ:ಹಿಮಾಚಲ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ಭರ್ಜರಿ ಗೆಲುವು ಸಾಧಿಸಿದೆ. ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿಗಾಗಿ ಫೈಟ್​ ಶುರುವಾಗಿದೆ. ಈ ನಡುವೆ ಹಿಮಾಚಲ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ದೊಡ್ಡ ಹೇಳಿಕೆ ನೀಡಿದ್ದಾರೆ. ವೀರಭದ್ರ ಸಿಂಗ್ ಮಾದರಿಯ ಅಭಿವೃದ್ಧಿಯಲ್ಲಿ ಹಿಮಾಚಲದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಾಗಿದೆ ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್

'ನಾವು ಈ ಚುನಾವಣೆಯಲ್ಲಿ ವೀರಭದ್ರ ಸಿಂಗ್ ಹೆಸರಿನಲ್ಲಿ ಸ್ಪರ್ಧಿಸಿದ್ದೇವೆ. ಅವರನ್ನು ನೋಡಿ, ಅವರ ಕೆಲಸ ನೋಡಿ ಜನ ಮತ ಹಾಕಿದ್ದಾರೆ. ಹೀಗಾಗಿ ನೀವು ವೀರಭದ್ರ ಸಿಂಗ್ ಅವರ ಕುಟುಂಬವನ್ನು ನಿರ್ಲಕ್ಷಿಸಬಹುದೇ ಎಂದು ಪ್ರಶ್ನಿಸಿದ್ದಾರೆ.

ಸುಮಾರು 60 ವರ್ಷಗಳಿಂದ ರಾಜ್ಯಕ್ಕೆ ಸೇವೆ ಸಲ್ಲಿಸಿದ ಕುಟುಂಬ ಇದಾಗಿದೆ. ವೀರಭದ್ರ ಸಿಂಗ್ ಅವರ ಕುಟುಂಬ ರಾಜ್ಯವನ್ನು ಈ ಹಂತಕ್ಕೆ ಕೊಂಡೊಯ್ದಿದೆ. ವೀರಭದ್ರ ಸಿಂಗ್ ಇನ್ನೂ ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿದ್ದಾರೆ ಮತ್ತು ಇಂದಿಗೂ ಜನರು ಅವರನ್ನು ಅದೇ ರೀತಿಯಲ್ಲಿ ನೆನಪಿಸಿಕೊಳ್ಳುತ್ತಾರೆ ಎಂದಿದ್ದಾರೆ.

ಹೀಗಿರುವಾಗ ವೀರಭದ್ರ ಸಿಂಗ್ ಅವರು ರಾಜ್ಯಕ್ಕೆ ಮಾಡಿದ ಕೆಲಸವನ್ನು, ಅವರ ಕುಟುಂಬ ಮಾಡಲು ಏಕೆ ಮಾಡಬಾರದು ಎಂಬ ಆಸೆ ಜನರಲ್ಲಿ ಮೂಡಿದೆ. ವೀರಭದ್ರ ಸಿಂಗ್‌ನ ಹೆಂಡತಿ ಏಕೆ ಮಾಡಬಾರದು, ಅವನ ಮಗ ಏಕೆ ಮಾಡಬಾರದು ಎಂದು ಜನರು ಹೇಳುತ್ತಿದ್ದಾರೆ.

ವೀರಭದ್ರ ಸಿಂಗ್ ಅವರ ಕುಟುಂಬದ ಮೇಲೆ ನಾವು ಹೆಚ್ಚಿನ ಭರವಸೆ ಹೊಂದಿದ್ದೇವೆ ಎಂದು ಸಾರ್ವಜನಿಕರು ಹೇಳುತ್ತಾರೆ. ನಾನು ಯಾವುದೇ ವ್ಯಕ್ತಿಯೊಂದಿಗೆ ನನ್ನನ್ನು ಹೋಲಿಸಿಕೊಳ್ಳಲು ಬಯಸುವುದಿಲ್ಲ. ನನಗೆ ಜವಾಬ್ದಾರಿ ಕೊಟ್ಟರೆ, ನಾನು ನಿರ್ವಹಿಸುವೆ. ಆ ಹುದ್ದೆಗೆ ನಾನು ಫಿಟ್ ಎಂದು ಭಾವಿಸುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹಿಮಾಚಲ ವಿಧಾನಸಭಾ ಚುನಾವಣೆ: ಒಬ್ಬರೇ ಒಬ್ಬ ಮಹಿಳಾ ಅಭ್ಯರ್ಥಿಗೆ ವಿಜಯ ಪ್ರಾಪ್ತಿ!

ABOUT THE AUTHOR

...view details