ಪ್ರತಾಪ್ಗಢ( ಉತ್ತರಪ್ರದೇಶ):ಇಡೀ ಜಗತ್ತಿನಾದ್ಯಂತ ಕೋವಿಡ್ ತಲ್ಲಣವನ್ನೇ ಸೃಷ್ಟಿಸಿದೆ. ಜನತೆ ವ್ಯಾಕ್ಸಿನ್ ಪಡೆಯಲು ಸಾಲುಗಟ್ಟಿ ಆಸ್ಪತ್ರೆಗಳ ಮುಂದೆ ನಿಂತಿರುವಾಗ, ಜಿಲ್ಲೆಯ ಜುಹಿ ಶುಕ್ಲಾಪುರ ಗ್ರಾಮಸ್ಥರು ಕೊರೊನಾ ಮಾತೆ ನಿರ್ಮಿಸಿದ್ದಾರೆ.
ಮಾಸ್ಕ್ ಧರಿಸಿರುವ ಕೊರೊನಾ ಮಾತೆ ವಿಗ್ರಹಕ್ಕೆ ಗ್ರಾಮಸ್ಥರು, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ನೂರಾರು ಜನರು ಒಂದೆಡೆ ಸೇರಿ ನಿಯಮ ಉಲ್ಲಂಘಿಸಿ ಕೊರೊನಾ ಮಾತೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಕೊರೊನಾ ಹರಡುವುದಿಲ್ಲ ಅನ್ನೋದು ಗ್ರಾಮಸ್ಥರ ಅಭಿಪ್ರಾಯ.
ಗ್ರಾಮದಲ್ಲಿ ವೈರಸ್ಗೆ ಮೂರು ಬಲಿ
ಕೋವಿಡ್ನಿಂದಾಗಿ ಗ್ರಾಮದಲ್ಲಿ ಈವರೆಗೆ ಮೂವರು ಮೃತಪಟ್ಟಿದ್ದಾರೆ. ಇದರಿಂದಾಗಿ ಭೀತಿಗೊಂಡ ಗ್ರಾಮಸ್ಥರು, ದೇಣಿಗೆ ಸಂಗ್ರಹಿಸಿ ಜೂನ್ 7 ರಂದು ಕೊರೊನಾ ಮಾತೆ ದೇಗುಲ ನಿರ್ಮಿಸಿದರು. ಬೇವಿನ ಮರದ ಪಕ್ಕ ಕೊರೊನಾ ಮಾತೆಯನ್ನು ಪ್ರತಿಷ್ಠಾಪಿಸಿರುವ ಜನ ನಿತ್ಯ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ.