ಕರ್ನಾಟಕ

karnataka

By

Published : May 2, 2022, 11:10 AM IST

ETV Bharat / bharat

ಸಕ್ರಿಯ ರಾಜಕಾರಣಕ್ಕೆ ಧುಮುಕುವ ಸುಳಿವು ನೀಡಿದ ಪ್ರಶಾಂತ್ ಕಿಶೋರ್?

ಇತ್ತೀಚೆಗೆ ಕಾಂಗ್ರೆಸ್‌ ಪಕ್ಷ ಸೇರಲು ನಿರಾಕರಿಸಿರುವ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್‌ ಸಕ್ರಿಯ ರಾಜಕರಣಕ್ಕೆ ಮರಳುವ ಮಹತ್ವದ ಸುಳಿವು ಕೊಟ್ಟಿದ್ದಾರೆ. ಈ ಕುರಿತು ಅವರು ವಿಶೇಷ ಟ್ವೀಟ್‌ ಮಾಡಿದ್ದಾರೆ.

ಪ್ರಶಾಂತ್ ಕಿಶೋರ್, Prashant Kishor
ಪ್ರಶಾಂತ್ ಕಿಶೋರ್

ನವದೆಹಲಿ: ಕಾಂಗ್ರೆಸ್‌ ಸೇರುವ ಆಫರ್ ತಿರಸ್ಕರಿಸಿರುವ, 'ಚುನಾವಣಾ ಚಾಣಕ್ಯ' ಎಂದೇ ಖ್ಯಾತಿ ಗಳಿಸಿರುವ ಪ್ರಶಾಂತ್ ಕಿಶೋರ್‌ ಇದೀಗ ಸಕ್ರಿಯ ಚುನಾವಣಾ ರಾಜಕೀಯಕ್ಕೆ ಬರುವ ಕುರಿತಾಗಿ ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ. ಕೈ ಪಕ್ಷದೊಂದಿಗಿನ ಇತ್ತೀಚೆಗಿನ ಬೆಳವಣಿಗೆಯ ನಂತರದಲ್ಲಿ ಇದೇ ಮೊದಲ ಬಾರಿಗೆ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿರುವಂತೆ ಕಾಣುತ್ತಿದೆ.

ಟ್ವೀಟ್‌ನಲ್ಲೇನಿದೆ?: 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಥಗರ್ಭಿತ ಪಾಲ್ಗೊಳ್ಳುವಿಕೆಗೆ ನಾನು ತುಡಿತ ಹೊಂದಿದ್ದೇನೆ. ಈ ಮೂಲಕ ಜನಪರ ನೀತಿಯನ್ನು ಅನುಷ್ಠಾನಕ್ಕೆ ತರುವ ಯೋಚನೆ ಇದೆ. ಸದ್ಯ ನಾನು ಪುಟ ತಿರುವಿ ಹಾಕುತ್ತಿದ್ದು, ನಿಜವಾದ ಪ್ರಭುಗಳ ಬಳಿ ತೆರಳುವ ಸಮಯ ಬಂದಿದೆ. ಬಿಹಾರದಿಂದ ಇದು ಆರಂಭ'.

ಪ್ರಶಾಂತ್ ಕಿಶೋರ್ ಮೂಲತಃ ಬಿಹಾರದವರು. ಈ ಹಿಂದೊಮ್ಮೆ ಸಿಎಂ ನಿತೀಶ್ ಕುಮಾರ್ ಪಕ್ಷ ಸೇರಿರುವ ಅವರು 16 ತಿಂಗಳ ನಂತರ ಪಕ್ಷ ತ್ಯಜಿಸಿದ್ದರು. ಇದೀಗ ಮತ್ತೆ ತಾಯ್ನಾಡಿಗೆ ಮರಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ, ಅವರು ಬಿಹಾರದಲ್ಲಿ ಈ ಬಾರಿ ಹೊಸ ರಾಜಕೀಯ ಪಕ್ಷ ಶುರು ಮಾಡ್ತಾರಾ ಅಥವಾ ಅಲ್ಲಿನ ಪ್ರತಿಪಕ್ಷವನ್ನು ಸೇರುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ. ಮೂಲಗಳ ಪ್ರಕಾರ, ಪ್ರಶಾಂತ್ ಕಿಶೋರ್ ರಾಜ್ಯವ್ಯಾಪಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ವಿಡಿಯೋ: ಜರ್ಮನಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ABOUT THE AUTHOR

...view details