ಕರ್ನಾಟಕ

karnataka

ETV Bharat / bharat

ಪ್ರಿಯಾಂಕಾ ಸಾಮರ್ಥ್ಯಕ್ಕೆ ರಾಹುಲ್ ಗಾಂಧಿ ಹೆದರುತ್ತಾರೆ: ರಾಜಕೀಯ ನಿಪುಣ ಪ್ರಶಾಂತ್ ಕಿಶೋರ್ - ಪ್ರಿಯಾಂಕಾ ಗಾಂಧಿ

ಬಹುಶಃ ಪ್ರಿಯಾಂಕಾ ಗಾಂಧಿ ಅವರ ಸಾಮರ್ಥ್ಯಕ್ಕೆ ಹೆದರಿ 2017ರ ಚುನಾವಣೆಯಲ್ಲಿ ಉತ್ತರಪ್ರದೇಶದ ಸಿಎಂ ಅಭ್ಯರ್ಥಿಯಾಗಿ ನಿಲ್ಲಲು ಪ್ರಿಯಾಂಕಾಗೆ ರಾಹುಲ್​ ಗಾಂಧಿ ಅವಕಾಶ ನೀಡಲಿಲ್ಲ ಎಂದು ಪ್ರಶಾಂತ್ ಕಿಶೋರ್ ಹೊಸ ಬಾಂಬ್​ ಸಿಡಿಸಿದ್ದಾರೆ..

ಭಾರತದ ರಾಜಕೀಯ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್
ಭಾರತದ ರಾಜಕೀಯ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್

By

Published : Oct 16, 2021, 5:22 PM IST

ಲಖನೌ (ಉತ್ತರಪ್ರದೇಶ) :ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ತಮ್ಮ ಸಹೋದರಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಸಾಮರ್ಥ್ಯಕ್ಕೆ ಹೆದರುತ್ತಾರೆ ಎಂದು ಭಾರತದ ರಾಜಕೀಯ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಪ್ರಶಾಂತ್ ಕಿಶೋರ್, ಪ್ರಿಯಾಂಕಾ ಗಾಂಧಿ ಅವರು ತನ್ನ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯಂತೆ ಕಾಣುತ್ತಾರೆ. ಸಾಮಾನ್ಯ ಜನರು ಕೂಡ ಅವರಲ್ಲಿ ಬಲವಾದ ನಾಯಕತ್ವ ಸಾಮರ್ಥ್ಯವನ್ನು ಕಂಡುಕೊಳ್ಳುತ್ತಾ ಇದ್ದಾರೆ.

ಆದರೆ, ಬಹುಶಃ ಈ ಗುಣಗಳು ರಾಹುಲ್ ಗಾಂಧಿಯನ್ನು ಹೆದರಿಸುತ್ತವೆ. ಅದಕ್ಕಾಗಿಯೇ 2017ರ ಚುನಾವಣೆಯಲ್ಲಿ ಉತ್ತರಪ್ರದೇಶದ ಸಿಎಂ ಅಭ್ಯರ್ಥಿಯಾಗಿ ನಿಲ್ಲಲು ಪ್ರಿಯಾಂಕಾಗೆ ರಾಹುಲ್ ಗಾಂಧಿ ಬಿಡಲಿಲ್ಲ ಎಂದು ಹೇಳಿ ಹೊಸ ಬಾಂಬ್​ ಸಿಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ ಪಕ್ಷಕ್ಕೆ ನಾನೇ ಪೂರ್ಣಾವಧಿ ಅಧ್ಯಕ್ಷೆ ಎಂದ ಸೋನಿಯಾ.. 2022ರಲ್ಲಿ ಚುನಾವಣೆ ಸಾಧ್ಯತೆ

ನಾನು ಮೊದಲು ಪಾಟ್ನಾದಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದೆ, ಬಳಿಕ ಅವರು ನನಗೆ ಕಾಂಗ್ರೆಸ್‌ಗಾಗಿ ಕೆಲಸ ಮಾಡುವಂತೆ ಕೇಳಿಕೊಂಡರು. ಆದರೆ, ದೇಶದಲ್ಲಿ ರಾಜಕೀಯ ಪರಿಸ್ಥಿತಿ, ವಿಶೇಷವಾಗಿ ಕಾಂಗ್ರೆಸ್‌ ಉತ್ತಮವಾಗಿಲ್ಲ ಎಂದು ಪ್ರಶಾಂತ್ ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details