ಅಮೃತಸರ್(ಪಂಜಾಬ್):2022ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿರುವ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ಇದೀಗ ತಮ್ಮ ರಾಜಕೀಯ ಪ್ರಧಾನ ಸಲಹೆಗಾರನಾಗಿ ಪ್ರಶಾಂತ್ ಕಿಶೋರ್ಗೆ ಸೇರಿಸಿಕೊಂಡಿದ್ದಾರೆ.
2017ರ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿ ಸರ್ಕಾರ ರಚನೆ ಮಾಡುವಲ್ಲಿ ಅಮರೀಂದರ್ ಸಿಂಗ್ ಯಶಸ್ವಿಯಾಗಿದ್ದರು. ಇದೀಗ ಮತ್ತೊಂದು ಅವಧಿ ಮೇಲೆ ಕಣ್ಣಿಟ್ಟಿರುವ ಅವರು, ಚುನಾವಣಾ ರಣತಂತ್ರದ ಪರಿಣಿತ ಪ್ರಶಾಂತ್ ಕಿಶೋರ್ಗೆ ಪಕ್ಷಕ್ಕೆ ಸೇರಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿದ್ದಾರೆ.