ಕರ್ನಾಟಕ

karnataka

ETV Bharat / bharat

ಸಿಖ್ ಗುರು ಗೋವಿಂದ್ ಸಿಂಗ್ 354ನೇ ಜನ್ಮದಿನ: ಪಾಟ್ನಾದಲ್ಲಿ 'ಪ್ರಕಾಶ್​ ಪರ್ವ' ಆಚರಣೆ - ಬಿಹಾರ ಸುದ್ದಿ

ಆಧ್ಯಾತ್ಮಿಕ ಗುರು, ಯೋಧ, ಕವಿ ಮತ್ತು ದಾರ್ಶನಿಕರಾದ 10 ನೇ ಸಿಖ್ ಗುರು ಗೋವಿಂದ್​​​ ಸಿಂಗ್ ಅವರ 354ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಕಾಶ್ ಉತ್ಸವ ಅಥವಾ ಪ್ರಕಾಶ್ ಪರ್ವ ಹಬ್ಬ ನಡೆಸಲಾಗುತ್ತದೆ.

Prakash Parv
ಪ್ರಕಾಶ್​ ಪರ್ವ' ಆಚರಣೆ

By

Published : Jan 19, 2021, 6:39 AM IST

ಪಾಟ್ನಾ (ಬಿಹಾರ): ಗುರು ಗೋವಿಂದ್​ ಸಿಂಗ್ ಅವರ 354ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಕಾಶ್ ಉತ್ಸವ ಅಥವಾ ಪ್ರಕಾಶ್ ಪರ್ವ ಹಬ್ಬ ನಡೆಸಲಾಗುತ್ತದೆ. ಹೀಗಾಗಿ ಬಿಹಾರದ ಹರಿಮಂದೀರ್ ಸಾಹಿಬ್​ನಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.

ಬಿಹಾರದ ಹರಿಮಂದೀರ್ ಸಾಹಿಬ್​ನ್ನು ತಖತ್ ಶ್ರೀಹರಿಮಂದಿರ್ ಜಿ ಪಾಟ್ನಾ ಸಾಹಿಬ್‌ ಎಂದೂ ಕರೆಯಲಾಗುತ್ತದೆ. ಗುರು ಗೋವಿಂದ್ ಸಿಂಗ್ ಜಯಂತಿಯನ್ನು ಪ್ರತಿವರ್ಷ ಜನವರಿ 20 ರಂದು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ.

ಗುರು ಗೋವಿಂದ್​​ ಸಿಂಗ್ ಜಿ ಅವರ 350ನೇ ಜನ್ಮ ವಾರ್ಷಿಕೋತ್ಸವ ಆಚರಿಸಲು 2017ರ ಜನವರಿಯಿಂದ ಪಾಟ್ನಾದಲ್ಲಿ ಪ್ರಾರಂಭಿಸಲಾಯಿತು. ಆಧ್ಯಾತ್ಮಿಕ ಗುರು, ಯೋಧ, ಕವಿ ಮತ್ತು ದಾರ್ಶನಿಕರಾದ 10 ನೇ ಸಿಖ್ ಗುರು ಗೋವಿಂದ್​ ಸಿಂಗ್. ಈ ದಿನವನ್ನು ಪಾಟ್ನಾದಲ್ಲಿ ಒಂದು ದೊಡ್ಡ ಆಚರಣೆಯನ್ನಾಗಿ ಮಾಡಲಾಗುತ್ತದೆ.

ABOUT THE AUTHOR

...view details