ಕೊಲ್ಹಾಪುರ (ಮಹಾರಾಷ್ಟ್ರ): ಹದಗೆಟ್ಟ ರಸ್ತೆಯಲ್ಲಿ ಹೋದರೆ ಪ್ರಸವ ವೇದನೆ ಉಂಟಾಗುತ್ತದೆ ಎಂದು ಕೆಲ ಜನರು ಆಗಾಗ್ಗೆ ಸಾಮಾನ್ಯವಾಗಿ ಮಾತನಾಡವುದನ್ನು ಕೇಳಿಯೇ ಇರುತ್ತೇವೆ. ಆದರೆ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಅಕ್ಷರಶಃ ಇಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಹೊಂಡ - ಗುಂಡಿಗಳಿಂದ ಕೂಡಿದ ರಸ್ತೆಯಿಂದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ತಲುಪಲು ಸಾಧ್ಯವಾಗದೇ, ಮಾರ್ಗ ಮಧ್ಯದಲ್ಲೇ ಆ ಮಹಿಳೆಗೆ ಹೆರಿಗೆ ಆಗಿದೆ.
ಇಲ್ಲಿನ ಭೂದರ್ಗಢ ತಾಲೂಕಿನ ತಿರವಾಡ ಬಳಿ ಶುಕ್ರವಾರ ಸಂಜೆ ಘಟನೆ ನಡೆದಿದೆ. ಗುಂಡಿಗಳಿಂದಲೇ ತುಂಬಿದ್ದ ರಸ್ತೆಯಿಂದ ಹಠಾತ್ ಆಗಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರಸ್ತೆ ಪಕ್ಕದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಒರಟಾದ ಸಸ್ಯದ ನಾರಿನಿಂದ ಹೊಕ್ಕುಳ ಬಳ್ಳಿ ಕತ್ತರಿಸಲಾಗಿದೆ. ಅದೃಷ್ಟವಶಾತ್ ತಾಯಿ ಮತ್ತು ಮಗು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಮುರಗುಡ ಗ್ರಾಮಾಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿಂಸಾತ್ಮಕ ಸಂಚಾರ: ಮಧ್ಯಪ್ರದೇಶ ಮೂಲದ ಕಿರಣ್ ಕೇಶು ಪಾಲ್ವಿ ಎಂಬ ಗರ್ಭಿಣಿ ಹಾಗೂ ಇತರ 32 ಜನರು ಟ್ರ್ಯಾಕ್ಟರ್ನಲ್ಲಿ ತಿರವಾಡಕ್ಕೆ ತೆರಳುತ್ತಿದ್ದರು. ಆದರೆ, ಈ ರಸ್ತೆ ತಗ್ಗು ಗುಂಡಿಗಳಿಂದ ಕೂಡಗಿತ್ತು. ಟ್ರ್ಯಾಕ್ಟರ್ ಚಲಿಸುವ ಸಾಧ್ಯವಾಗದೇ ಹಿಂಸಾತ್ಮಕವಾಗಿ ಜರ್ಕಿಂಗ್ ಆಗಿದೆ. ಪರಿಣಾಮ ಗರ್ಭಿಣಿ ಪಾಲ್ವಿಗೆ ತೀವ್ರ ತೊಂದರೆ ಉಂಟಾಗಿದೆ. ಇದೇ ವೇಳೆ, ಚಕ್ರವೊಂದು ದೊಡ್ಡ ಹೊಂಡಕ್ಕೆ ಬಿದ್ದಿದ್ದರಿಂದ ಇಡೀ ಟ್ರ್ಯಾಕ್ಟರ್ ಏಕಾಏಕಿ ಪುಟಿದು ಬಿದ್ದಿದೆ. ಆಗ ಮತ್ತಷ್ಟು ನೋವು ಹೆಚ್ಚಾಗಿ ಆಕೆ ಕಣ್ಣೀರು ಹಾಕಲು ಆರಂಭಿಸಿದ್ದಾರೆ.