ಕರ್ನಾಟಕ

karnataka

ETV Bharat / bharat

ಹಂಪಿಯಲ್ಲಿದೆ ಮಹಿಳಾ ಸಿಬ್ಬಂದಿಯ ಅಂಚೆ ಕಚೇರಿ..ಇತಿಹಾಸದ ಪುಟ ಸೇರಿ ದೇಶಕ್ಕೆ ಮಾದರಿ - ಕೊಂಡನಾಯಕ ಹಳ್ಳಿ

ಮನೆಯವರ ಆರೈಕೆಯ ಜತೆಗೇ ಪುರುಷರಂತೆ ಮಹಿಳೆಯರು ಹೇಗೆ ದುಡಿಯುತ್ತಾರೆ ಅನ್ನೋಕೆ ಈ ಅಂಚೆ ಕಚೇರಿ ಒಳ್ಳೇ ಉದಾಹರಣೆ. ಇಲ್ಲಿನ ಪೋಸ್ಟ್‌ ಮ್ಯಾನೇಜರ್, ಸಹಾಯಕ ಪೋಸ್ಟ್ ಮ್ಯಾನೇಜರ್ ಹಾಗೂ ಪೊಸ್ಟ್‌ ವುಮೆನ್‌ ಜತೆಗೆ ಅಂಚೆ ಕಚೇರಿ ವ್ಯಾಪ್ತಿಯ ಗ್ರಾಮಗಳಲ್ಲೂ ಮಹಿಳಾ ಪೋಸ್ಟ್‌ವುಮೆನ್‌ಗಳೇ ಕೆಲಸ ಮಾಡ್ತಿದ್ದಾರೆ.

ಹಂಪಿಯಲ್ಲಿದೆ ಮಹಿಳಾ ಸಿಬ್ಬಂದಿಯೇ ನಡೆಸುವ ಅಂಚೆ ಕಚೇರಿ
ಹಂಪಿಯಲ್ಲಿದೆ ಮಹಿಳಾ ಸಿಬ್ಬಂದಿಯೇ ನಡೆಸುವ ಅಂಚೆ ಕಚೇರಿ

By

Published : May 21, 2021, 6:02 AM IST

ಬಳ್ಳಾರಿ: ವಿಶ್ವಪ್ರಸಿದ್ಧ ಹಂಪಿ ಯಾರಿಗೆ ಗೊತ್ತಿಲ್ಲ ಹೇಳಿ, ಆದರೆ, ಇದೇ ಹಂಪಿಯೊಳಗೆ ಈಗ ಒಂದು ಅಂಚೆ ಕಚೇರಿ ಸಾಕಷ್ಟು ಮನ್ನಣೆ ಗಳಿಸ್ತಿದೆ. ಅದರ ವಿಶೇಷವನ್ನ ನೋಡಿದ್ರೇ ನಿಮ್ಗೂ ಅವರ ಬಗ್ಗೆ ಅಭಿಮಾನ ಮೂಡದೇ ಇರೋದಿಲ್ಲ.

ದುಡಿದ ದುಡ್ಡನ್ನ ಉಳಿತಾಯ ಮಾಡೋದ್‌ ಹೇಗೆ ಅಂತಾ ಹೇಳ್ತಿರುವ ಇವರು ಪೋಸ್ಟ್‌ವುಮೆನ್‌ ಬಸಮ್ಮ. ಬರೀ ಮನೆ ಮನೆಗೆ ಪೋಸ್ಟ್‌ಗಳನ್ನಷ್ಟೇ ತಲುಪಿಸೋದಲ್ಲ, ಇವರು ಮಹಿಳೆಯರಿಗೆ ವ್ಯವಹಾರ ಜ್ಞಾನ ಮೂಡಿಸ್ತಿದ್ದಾರೆ. ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ವಿಶ್ವಪ್ರಸಿದ್ಧ ಹಂಪಿಯೊಳಗಿನ ಮಹಿಳಾ ಅಂಚೆ ಕಚೇರಿಯಲ್ಲಿ ಇದೇ ಬಸಮ್ಮ ಮಹಿಳಾ ಪೋಸ್ಟ್‌ ವುಮೆನ್‌

ಹಂಪಿಯಲ್ಲಿದೆ ಮಹಿಳಾ ಸಿಬ್ಬಂದಿಯ ಅಂಚೆ ಕಚೇರಿ

ಮನೆಯವರ ಆರೈಕೆಯ ಜತೆಗೇ ಪುರುಷರಂತೆ ಮಹಿಳೆಯರು ಹೇಗೆ ದುಡಿಯುತ್ತಾರೆ ಅನ್ನೋಕೆ ಈ ಅಂಚೆ ಕಚೇರಿ ಒಳ್ಳೇ ಉದಾಹರಣೆ. ಇಲ್ಲಿನ ಪೋಸ್ಟ್‌ ಮ್ಯಾನೇಜರ್, ಸಹಾಯಕ ಪೋಸ್ಟ್ ಮ್ಯಾನೇಜರ್ ಹಾಗೂ ಪೊಸ್ಟ್‌ ವುಮೆನ್‌ ಜತೆಗೆ ಅಂಚೆ ಕಚೇರಿ ವ್ಯಾಪ್ತಿಯ ಗ್ರಾಮಗಳಲ್ಲೂ ಮಹಿಳಾ ಪೋಸ್ಟ್‌ವುಮೆನ್‌ಗಳೇ ಕೆಲಸ ಮಾಡ್ತಿದ್ದಾರೆ.

ಮಲ್ಫನ್ ಗುಡಿ ಹಾಗೂ ಕೊಂಡನಾಯಕ ಹಳ್ಳಿಯಲ್ಲಿ ಪೋಸ್ಟ್‌ ವುಮನ್‌ ಆಗಿರುವ ಬಸಮ್ಮ, ತಮ್ಮ ಕೆಲಸದ ಬಗ್ಗೆ ಆತ್ಮತೃಪ್ತಿ ಹೊಂದಿದ್ದಾರೆ.

ಹಳ್ಳಿಯ ಹೆಣ್ಮಕ್ಕಳು ಅದರಲ್ಲಿ ಇದರಲ್ಲಿ ಒಂದಿಷ್ಟು ಹಣ ಮೀಗಿಸಿಟ್ಟಿರ್ತಾರೆ. ಆದರೆ, ಅದನ್ನ ಹೇಗೆ ಉಳಿತಾಯ ಮಾಡ್ಬೇಕೆಂಬುದರ ಬಗ್ಗೆ ಗೊತ್ತಿರಲ್ಲ. ಅಂತಹ ಮಹಿಳೆಯರಿಗೆಲ್ಲ ಈ ಅಂಚೆ ಕಚೇರಿ ವರದಾನ. ಇಲ್ಲಿನ ಪ್ರತಿ ಸಿಬ್ಬಂದಿಯೂ ಹೆಣ್ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸ್ತಿದ್ದಾರೆ.

ಈ ಪ್ರದೇಶದ ನಾರಿಯರಿಗೆ ಈ ಅಂಚೆ ಕಚೇರಿ ಸಾಕಷ್ಟು ವ್ಯವಹಾರ ಜ್ಞಾನ ಹೆಚ್ಚಿಸುತ್ತಿದೆ. ಅದಕ್ಕೆ ಕಾರಣ ಈ ಆಫೀಸ್‌ನ ಮಹಿಳೆಯರು

ABOUT THE AUTHOR

...view details