ನವದೆಹಲಿ :ಜಮ್ಮುವಿನಲ್ಲಿರುವ ವಾಯುನೆಲೆಯ ಮೇಲೆ ದಾಳಿ ಮಾಡಲು ಭಯೋತ್ಪಾದಕರು ಅನೇಕ ಬಾರಿ ಶಸ್ತ್ರ ಹೊಂದಿದ್ದ ಡ್ರೋನ್‌ಗಳನ್ನು ಗಡಿ ದಾಟಿಸಲು ಯತ್ನಿಸಿದ್ದರು. ಈ ಹಿನ್ನೆಲೆ ಉಗ್ರರ ಪ್ರಯತ್ನ ದಮನ ಮಾಡುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆ (ಐಎಎಫ್) 10 ಕೌಂಟರ್ ಮಾನವರಹಿತ ಡ್ರೋನ್ ವ್ಯವಸ್ಥೆಗಳನ್ನು (ಸಿಯುಎಎಸ್) ಪ್ರಾರಂಭಿಸಲಿದೆ.
ಉಗ್ರರ ಪ್ಲಾನ್ ದಮನಿಸಲು ಮುಂದಾದ ಸೇನೆ : ಆ್ಯಂಟಿ ಡ್ರೋನ್ ಸಿಸ್ಟಂ ಅಳವಡಿಸಲಿದೆ IAF
ಜಮ್ಮು ವಾಯುನೆಲೆಗೆ ಬಾಂಬ್ ದಾಳಿ ನಡೆಸಲು ಭಯೋತ್ಪಾದಕರು ಎರಡು ಡ್ರೋನ್‌ಗಳನ್ನು ಈ ಹಿಂದೆ ಬಳಸಿದ್ದರು. ಇನ್ನು, ದಾಳಿ ನಡೆಸಿದ್ದ ಸಂದರ್ಭದಲ್ಲಿ ಕಟ್ಟಡವೊಂದಕ್ಕೆ ಹಾನಿಯಾಗಿದ್ದು, ಇಬ್ಬರು ಸಿಬ್ಬಂದಿಗೆ ಗಾಯವಾಗಿತ್ತು..
ಈ ವ್ಯವಸ್ಥೆ ಮೇಡ್ ಇನ್ ಇಂಡಿಯಾದ ಮೂಲಕ ತಯಾರಾಗಲಿದೆ. ಡ್ರೋನ್ ವಿರೋಧಿ ವ್ಯವಸ್ಥೆಯ ಮುಖ್ಯ ಆಯುಧ ಲೇಸರ್ ಆಧಾರಿತ ಡೈರೆಕ್ಟ್ ಎನರ್ಜಿ ವೆಪನ್ ಆಗಿರಬೇಕು. ಐಎಎಫ್ ಈ ವ್ಯವಸ್ಥೆಗಳನ್ನು ವಿವಿಧ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಿದೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯೋಜನೆ ರೂಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
"ಈ ವ್ಯವಸ್ಥೆಯ ಮೂಲಕ ಸೇನೆಗೆ ಎಚ್ಚರಿಕೆ ರವಾನೆಯಾಗಬೇಕು. ಜೊತೆಗೆ ಸಂಯೋಜಿತ ಸಾಂದರ್ಭಿಕ ಚಿತ್ರಗಳನ್ನು ರವಾನಿಸುವಂತಿರಬೇಕು" ಎಂದು ಆರ್‌ಎಫ್‌ಐ ಹೇಳಿದೆ. ಜಮ್ಮು ವಾಯುನೆಲೆಗೆ ಬಾಂಬ್ ದಾಳಿ ನಡೆಸಲು ಭಯೋತ್ಪಾದಕರು ಎರಡು ಡ್ರೋನ್‌ಗಳನ್ನು ಈ ಹಿಂದೆ ಬಳಸಿದ್ದರು. ಇನ್ನು, ದಾಳಿ ನಡೆಸಿದ್ದ ಸಂದರ್ಭದಲ್ಲಿ ಕಟ್ಟಡವೊಂದಕ್ಕೆ ಹಾನಿಯಾಗಿದ್ದು, ಇಬ್ಬರು ಸಿಬ್ಬಂದಿಗೆ ಗಾಯವಾಗಿತ್ತು. ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸುತ್ತಿದೆ.