ನವದೆಹಲಿ:2021ರ ಸ್ನಾತಕೋತ್ತರ ರಾಷ್ಟ್ರೀಯ ಅರ್ಹತೆ ಪರೀಕ್ಷೆ ಮತ್ತು ನೀಟ್-ಸೂಪರ್ ಸ್ಪೆಷಾಲಿಟಿ (NEET-SS) ಪರೀಕ್ಷೆಯನ್ನು ಹಳೆಯ ಪರೀಕ್ಷಾ ಮಾದರಿಯಲ್ಲೇ ನಡೆಸಲಾಗುತ್ತದೆ. ಮುಂದಿನ ವರ್ಷದಿಂದ ಹೊಸ ಮಾದರಿಯ ಪರೀಕ್ಷಾ ಪದ್ಧತಿ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE) ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿವೆ
ವಿದ್ಯಾರ್ಥಿಗಳ ಆಸಕ್ತಿಯನ್ನು ಪರಿಗಣಿಸಿ, ಕೇಂದ್ರವು ಪರಿಷ್ಕೃತ ಪರಿಷ್ಕೃತ ಪದ್ಧತಿಯನ್ನು 2022ರಿಂದ ಜಾರಿಗೆ ತರಲು ನಿರ್ಧರಿಸಿದೆ. ಪ್ರಸ್ತುತ ಪರೀಕ್ಷೆಯು 2020ರ ಪರೀಕ್ಷಾ ಪದ್ಧತಿ ಆಧರಿಸಿ ನಡೆಯಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
ಈ ಮೊದಲಿನ ಅಧಿಸೂಚನೆಯಂತೆ ನವೆಂಬರ್ ತಿಂಗಳಲ್ಲಿ NEET-SS ಪರೀಕ್ಷೆಯನ್ನು ನಡೆಸಬೇಕಾಗಿತ್ತು. ಆದರೆ ಈಗ ಎರಡು ತಿಂಗಳ ಕಾಲ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಜನವರಿ 10-11ರಂದು ಪರೀಕ್ಷೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯಾವಕಾಶ ಒದಗಿಸಲಾಗುತ್ತದೆ ಎಂದು ಕೋರ್ಟ್ಗೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಕೆ ಮಾಡಿದೆ.