ಮುಂಬೈ(ಮಹಾರಾಷ್ಟ್ರ) : ಸಕಾರಾತ್ಮಕ ಚಿಂತನೆ ಮತ್ತು ಸರಿಯಾದ ಚಿಕಿತ್ಸೆಯ ಕಾರಣದಿಂದ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಶತಾಯುಷಿ ಅಜ್ಜಿವೋರ್ವರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.
102 ವರ್ಷದ ಶುಶೀಲಾ ಪಥಕ್ ಕೋವಿಡ್ ಗೆದ್ದಿರುವ ವೃದ್ಧೆ. ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಶುಶೀಲ್ ಪಥಕ್, ಚಿಕಿತ್ಸೆ ಜೊತೆ ತನ್ನ ಆತ್ಮಸ್ಥೈರ್ಯದಿಂದ ಕೋವಿಡ್ ಮುಕ್ತರಾಗಿ 15 ದಿನದೊಳಗೆ ಮನೆಗೆ ಮರಳಿದ್ದಾರೆ.
ಕೋವಿಡ್ ಗೆದ್ದ 102 ವರ್ಷದ ಅಜ್ಜಿ ಓದಿ : ಆಮ್ಲಜನಕ ತಂದು 22 ಜನರ ಪ್ರಾಣ ಉಳಿಸಿದ ಪೊಲೀಸಪ್ಪ.. ಈ ಪೊಲೀಸ್ ಸಮಯ ಪ್ರಜ್ಞೆಗೆ ಸೆಲ್ಯೂಟ್
ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಪ್ರಯತ್ನ ಪಥಕ್ ಅವರ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ ಪಥಕ್ ಅವರು ಕೂಡ ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಉತ್ತಮವಾಗಿ ಪ್ರತಿಕ್ರಿಯಿಸಿದ್ದರು. ಅಜ್ಜಿ ಗುಣಮುಖರಾಗಿ ಮನೆಗೆ ತೆರಳುವಾಗ ಆಸ್ಪತ್ರೆ ಸಿಬ್ಬಂದಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.