ಕರ್ನಾಟಕ

karnataka

ETV Bharat / bharat

ಅಕ್ರಮ ಅಲೋಪತಿ ಔಷಧ ಕ್ಲಿನಿಕ್: ಜನಪ್ರಿಯ ಯೂಟ್ಯೂಬರ್ ಬಂಧನ - Popular YouTuber arrested

ಅಲೋಪತಿ ಔಷಧ ಕುರಿತು ಅಕ್ರಮವಾಗಿ ಕ್ಲಿನಿಕ್ ನಡೆಸಿದ್ದಕ್ಕಾಗಿ, ಯೂಟ್ಯೂಬ್ ಚಾನೆಲ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದ ಜನಪ್ರಿಯ ಯೂಟ್ಯೂಬರ್​ನನ್ನು ಬಂಧಿಸಲಾಗಿದೆ

arrest
arrest

By

Published : May 29, 2021, 9:52 PM IST

ಪೊರ್ಚೆಜಿಯಾನ್​: ಅಲೋಪತಿ ಔಷಧ ಕುರಿತು ಅಕ್ರಮವಾಗಿ ಕ್ಲಿನಿಕ್ ನಡೆಸಿದ್ದಕ್ಕಾಗಿ ಜನಪ್ರಿಯ ಯೂಟ್ಯೂಬರ್​ನನ್ನು ಬಂಧಿಸಲಾಗಿದೆ.

'ಸಪ್ಪಾತು ರಾಮನ್' ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಜನಪ್ರಿಯ ಯೂಟ್ಯೂಬರ್​ನನ್ನು 28 ವರ್ಷಗಳಿಗಿಂತ ಹೆಚ್ಚು ಕಾಲ ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿದ್ದಕ್ಕಾಗಿ ಬಂಧಿಸಲಾಗಿದೆ.

ಬಂಧಿತ ಯೂಟ್ಯೂಬರ್ ಕಲ್ಲಕುರಿಚಿ ಜಿಲ್ಲೆಯ ಕೂಗೈಯೂರ್ ಗ್ರಾಮದವರಾಗಿದ್ದು, ಬಿಇಎಂಎಸ್ (ಸಿದ್ಧ ಮೆಡಿಸಿನ್​​) ಪದವೀಧರರಾಗಿದ್ದಾರೆ. ಸಿದ್ಧ ಮೆಡಿಸಿನ್​​ ಪರಿಣತಿ ಹೊಂದಿದ್ದರೂ, ಅಕ್ರಮವಾಗಿ ಅಲೋಪತಿ ಔಷಧ ನೀಡುವ ಕ್ಲಿನಿಕ್ ನಡೆಸುತ್ತಿರುವುದರಿಂದ ಇವರನ್ನು ಮೇ 27 ರಂದು ಸ್ಥಳೀಯ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ.

ಈತ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, ಆಹಾರ ಸಂಬಂಧಿತ ವಿಡಿಯೊಗಳನ್ನು ನಿಯಮಿತವಾಗಿ ಚಾನಲ್‌ನಲ್ಲಿ ಪೋಸ್ಟ್ ಮಾಡುತ್ತಿದ್ದರು.

ABOUT THE AUTHOR

...view details