ಮುಂಬೈ (ಮಹಾರಾಷ್ಟ್ರ):ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಚಲನಚಿತ್ರ ನಿರ್ಮಾಣ ಕಂಪನಿಯಾದ ಉಲ್ಲು ಡಿಜಿಟಲ್ ಪ್ರೈವೇಟ್ ಲಿಮಿಟೆಡ್ನ ಸಿಇಒ ವಿಭು ಅಗರವಾಲ್ ಅವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ಮುಂಬೈ ಪೊಲೀಸರು ದೂರು ದಾಖಲಿಸಿಕೊಂಡಿದ್ದು, 28 ವರ್ಷದ ಯುವತಿಗೆ ಅಂಧೇರಿ ನಗರದ ಕಂಪನಿಯ ಸ್ಟೋರ್ ರೂಮ್ನಲ್ಲಿ ಲೈಂಗಿಕ ಕಿರುಕುಳ ನೀಡಿರುವ ಕುರಿತು ದೂರು ದಾಖಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.