ಲಖನೌ:ಉತ್ತರ ಪ್ರದೇಶದಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷದ ನಿರೀಕ್ಷೆಗಳು ಹುಸಿಯಾಗಿವೆ. ರಾಜ್ಯದಲ್ಲಿ ಹೀನಾಯವಾಗಿ ಪಕ್ಷ ಸೋತಿದೆ.
ಈ ಬಾರಿ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಗೆ ಹೆಚ್ಚಿನ ಒತ್ತು ನೀಡಿತ್ತು. ಯಾವುದೇ ಪಕ್ಷವು ತನ್ನ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚಕ್ಕಾಗಿ ಹಣವನ್ನು ನೀಡಿಲ್ಲ, ಆದರೆ, ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಹಣವನ್ನು ಖರ್ಚು ಮಾಡಿದೆ. ಪಕ್ಷದ ಪ್ರತಿಯೊಂದು ತಂತ್ರವು ತಲೆಕೆಳಗಾಗಿದೆ. ಹಣ ಖರ್ಚು ಮಾಡಿದ್ರೂ ಅಪೇಕ್ಷಿತ ಯಶಸ್ಸು ಪಡೆಯಲಿಲ್ಲ. ಇದು ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭರವಸೆಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. ರಾಜ್ಯಾದ್ಯಂತ ಜಿಲ್ಲಾ ಪಂಚಾಯತ್ ಸದಸ್ಯರ ಒಟ್ಟು 3050 ಸ್ಥಾನಗಳಲ್ಲಿ ಪಕ್ಷವು ಕೇವಲ 80 ಸ್ಥಾನಗಳನ್ನು ಗೆದ್ದಿದೆ.