ಕರ್ನಾಟಕ

karnataka

ETV Bharat / bharat

ಹೌಸ್​ ಬೋಟಿಗೂ ನುಗ್ಗಿದ ನೀರು: ಸೂರಿಗಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದೆ ಈ ಬಡ ಕುಟುಂಬ - srinagara news '

ಕಳೆದ ಬುಧವಾರ ಬೆಳಗ್ಗೆ ಹೌಸ್ ಬೋಟ್‌ಗೆ ನೀರು ಪ್ರವೇಶಿಸಲು ಪ್ರಾರಂಭಿಸಿದೆ. ಇದ್ದಕ್ಕಿದ್ದಂತೆ ಪ್ರವಾಹ ಉಂಟಾಗಿದೆ. ಆ ವೇಳೆ, ಜೀವವನ್ನು ಉಳಿಸಿಕೊಳ್ಳಲು ಮುಂದಾದರೇ ಹೊರತು ಅಲ್ಲಿದ್ದ ವಸ್ತುಗಳ ಕಡೆ ಗಮನ ಹರಿಸಲಾಗಲಿಲ್ಲ. ಪರಿಣಾಮ ನಿತ್ಯ ನರಕ ಅನುಭವಿಸುತ್ತಿದೆ ಈ ಕುಟುಂಬ.

Poor family forced to live under the open sky
ಸೂರಿಗಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದೆ ಈ ಬಡ ಕುಟುಂಬ

By

Published : Oct 25, 2021, 6:10 PM IST

ಶ್ರೀನಗರ: ಭೂಮಿ ದುಂಡಾಗಿದೆ ಎಲ್ಲಿ ಬೇಕಾದರೂ ಬದುಕಬಹುದು ಅಂದುಕೊಂಡರೆ ಈ ಕಾಲದಲ್ಲಿ ತುಂಬಾನೆ ಕಷ್ಟ. ಬಡತನದ ಬೇಗೆ ಬಡ ಕುಟುಂಬವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಜಾಫರ್ ಅಹ್ಮದ್ ಗಸ್ಸಿ ಮತ್ತು ಅವರ ಕುಟುಂಬವು ಮನೆಯಿಲ್ಲದೇ ಜೀವನವನ್ನು ನಡೆಸುತ್ತಿದೆ. ಅವರ ಕುಟುಂಬವು ದೋಣಿಗಳಲ್ಲಿ ಸಂತೋಷದಿಂದ ಬದುಕುತ್ತಿತ್ತು, ಆದರೆ, ನೀರು ಆ ಗೂಡನ್ನು ಕೂಡ ನಾಶಪಡಿಸುತ್ತದೆ ಎಂದು ಅವರಿಗೆ ಅರಿವಿರಲಿಲ್ಲ

ಕಳೆದ ಬುಧವಾರ ಬೆಳಗ್ಗೆ ಗಸ್ಸಿ ಹೌಸ್ ಬೋಟ್‌ಗೆ ನೀರು ಪ್ರವೇಶಿಸಲು ಪ್ರಾರಂಭಿಸಿದೆ. ಇದ್ದಕ್ಕಿದ್ದಂತೆ ಪ್ರವಾಹ ಉಂಟಾಗಿದೆ. ಆ ವೇಳೆ, ಜೀವವನ್ನು ಉಳಿಸಿಕೊಳ್ಳಲು ಮುಂದಾದರು. ಆದರೆ, ಅಲ್ಲಿದ್ದ ವಸ್ತುಗಳ ಕಡೆ ಗಮನ ಹರಿಸಲಾಗಲಿಲ್ಲ. ಪರಿಣಾಮ ನಿತ್ಯ ನರಕ ಅನುಭವಿಸುತ್ತಿದೆ ಈ ಕುಟುಂಬ.

ಶ್ರೀನಗರ ಜಲಮಾರ್ಗದ ಬಳಿ ಇರುವ ಝೇಲಂ ದಡದಲ್ಲಿರುವ ಹೌಸ್ ಬೋಟ್ ಇನ್ನು ಮುಂದೆ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಈ ಬಡ ಕುಟುಂಬವು ತಮ್ಮ ಸಂಬಂಧಿಕರೊಂದಿಗೆ ವಾಸಿಸಲು ಮುಂದಾಗಿದೆ. ವಿಪರ್ಯಾಸ ಎಂದರೆ, ಗಸ್ಸಿ ತನ್ನ ಅಲ್ಪ ಆದಾಯದಿಂದಾಗಿ ಈ ಹೌಸ್ ಬೋಟ್ ಅನ್ನು ದುರಸ್ತಿ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ.

ಸೂರಿಗಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದೆ ಈ ಬಡ ಕುಟುಂಬ

ತಾತ್ಕಾಲಿಕ ಕೊಠಡಿಗೆ ಮಾಸಿಕ ಬಾಡಿಗೆ ನೀಡಲು ಸಾಧ್ಯವಾಗದಿದ್ದರೂ, ಚಳಿಗಾಲದಲ್ಲಿ ಉಳಿಯಲು ತನಗೆ ಬೇರೆ ಸ್ಥಳವಿಲ್ಲ ಎಂದು ಜಾಫರ್ ನೋವು ತೋಡಿಕೊಂಡಿದ್ದಾನೆ.

ಮುಳುಗಿರುವ ಈ ದೋಣಿ ದುರಸ್ತಿಗೆ ಕನಿಷ್ಠ ಒಂದು ಲಕ್ಷ ರೂ. ಬೇಕು. ದುರಸ್ತಿಗೆ ಬಳಸುವ ವಿಶೇಷ ಮರದ ಬೆಲೆ ಕೂಡ ಸಾಕಷ್ಟು ಹೆಚ್ಚಾಗಿದ್ದು, ಇದು ಈ ಕುಟುಂಬದ ಖರೀದಿ ಶಕ್ತಿಗೂ ಮೀರಿದೆ. ಈ ಹಿನ್ನೆಲೆ ಸೂರಿಗಾಗಿ ಸಹಾಯ ಮಾಡಲು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ದಾಲ್ ಸರೋವರ, ನಾಗಿನ್ ಮತ್ತು ಝೇಲಂ ನದಿಯಲ್ಲಿ ಕಳೆದ ವರ್ಷದಿಂದ ಹತ್ತಕ್ಕೂ ಹೆಚ್ಚು ಹೌಸ್ ಬೋಟ್‌ಗಳು ಮುಳುಗಿವೆ.

ABOUT THE AUTHOR

...view details