ಟೈಪ್-1 ಮಧುಮೇಹ ಹೊಂದಿರುವ ಮಕ್ಕಳನ್ನು ಈ ಕಾಯಿಲೆ ಇಲ್ಲದ ಮಕ್ಕಳಿಗೆ ಹೋಲಿಕೆ ಮಾಡಿ ನೋಡಿದಾಗ, ಕಾಯಿಲೆ ಇರುವ ಮಕ್ಕಳು ಕೋವಿಡ್-19 ಸಂಬಂಧಿತ ತೊಂದರೆ ಮತ್ತು ಸಾವಿಗೆ 10 ಪಟ್ಟು ಸನಿಹದಲ್ಲಿರುತ್ತಾರೆ ಎಂದು ಭಾರತೀಯ ಮೂಲದ ಸಂಶೋಧಕರು ಹೇಳುತ್ತಾರೆ.
ENDO 2021ರಲ್ಲಿ ವಾಸ್ತವಿಕವಾಗಿ ಪ್ರಸ್ತುತಪಡಿಸಲಾದ ಅಧ್ಯಯನದ ಪ್ರಕಾರ, ಹಿಮೋಗ್ಲೋಬಿನ್- ಎ1ಸಿ - ಮಕ್ಕಳಲ್ಲಿ ಶೇ.9ಕ್ಕಿಂತ ಹೆಚ್ಚಿದ್ದರೆ ಅವರಲ್ಲಿ ಕೋವಿಡ್-19 ಸಂಬಂಧಿತ ತೊಂದರೆಗಳು ಹೆಚ್ಚಿರುತ್ತವೆ. ಅದೇ ಎ1ಸಿ ಮಟ್ಟವು ಮಧುಮೇಹ ಇಲ್ಲದ ಮಕ್ಕಳಲ್ಲಿ ಶೇ.7ಕ್ಕಿಂತ ಕಡಿಮೆ ಇದ್ದು, ಅವರಲ್ಲಿ ಕೋವಿಡ್ ರೋಗದಿಂದ ಉಂಟಾಗುವ ತೊಂದರೆ ಮತ್ತು ಸಾವು ಕಡಿಮೆ ಇರುತ್ತದೆ.
"ಸಾಂಕ್ರಾಮಿಕ ರೋಗದ ಸಮಯದಲ್ಲಿ ಮಕ್ಕಳ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವುದು ಎಂದಿಗಿಂತಲೂ ಮುಖ್ಯವಾಗಿದೆ ಎಂದು ಈ ಅಧ್ಯಯನವು ತೋರಿಸುತ್ತದೆ" ಎಂದು ಯುಎಸ್ನ ಅರ್ಕಾನ್ಸಾಸ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಮನೀಶ್ ರೈಸಿಂಗಾನಿ ಹೇಳಿದ್ದಾರೆ.
"ಈ ಸಂಶೋಧನೆ ಟೈಪ್-1 ಮಧುಮೇಹ ಹೊಂದಿರುವ ಮಕ್ಕಳಿಗೆ ಸಹಾಯ ಮಾಡುತ್ತದೆ ಮತ್ತು ಅವರ ಕುಟುಂಬಗಳು ಈ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗೆ ಖುದ್ದಾಗಿ ಹಾಜರಾಗುವುದು ಹಾಗೂ ಇತರ ವೈಯಕ್ತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸುರಕ್ಷತೆಯ ಬಗ್ಗೆ ಉತ್ತಮ ಆಯ್ಕೆಗಳನ್ನು ಮಾಡಲು ಸಹಾಯ ಮಾಡುತ್ತದೆ" ಎಂದು ರೈಸಿಂಗಾನಿ ಹೇಳುತ್ತಾರೆ.