ಪುರ್ನಿಯಾ(ಬಿಹಾರ್):ಬಡತನ ಶಾಪವಲ್ಲ, ಅದರ ಹಿಂದೆ ಅದೃಷ್ಟವೂ ಇರುತ್ತದೆ. ಯಾವ ಟೈಮಲ್ಲಿ ಏನಾಗುತ್ತೆ ಅನ್ನೋದು ಬಹುಶಃ ಆ ಭಗವಂತನಿಗೂ ಗೊತ್ತಿಲ್ಲವೇನೋ. ಬಿಹಾರದ ಆಟೋ ಚಾಲಕನೊಬ್ಬ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾನೆ. ಇದಕ್ಕೆ ಕಾರಣ ಕ್ರಿಕೆಟ್ ಬೆಟ್ಟಿಂಗ್ನ ಡ್ರೀಮ್ 11 ಆ್ಯಪ್.
ನಿಜ..! ಐಪಿಎಲ್ ಕ್ರಿಕೆಟ್ ಡ್ರೀಮ್ 11ನಲ್ಲಿ 39 ರೂಪಾಯಿ ಬೆಟ್ಟಿಂಗ್ ಮಾಡಿ ಈಗ ಕೋಟಿ ಕೋಟಿ ಹಣ ಪಡೆದಿದ್ದಾನೆ. ಆ ಅದೃಷ್ಟ ಖುಲಾಯಿಸಿದ ವ್ಯಕ್ತಿಯ ಹೆಸರು ನೌಶಾದ್ ಅನ್ಸಾರಿ. ಬಿಹಾರದ ಪುರ್ನಿಯಾ ಎಂಬಲ್ಲಿ ಆಟೋ ಓಡಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ನಡೆಯುತ್ತಿರುವ ಐಪಿಎಲ್ ಹಂಗಾಮದಲ್ಲಿ ತಮ್ಮ ಕನಸಿನ ತಂಡವನ್ನು ರಚಿಸಿದ್ದ ಆಟೋ ಚಾಲಕ, ಕೋಟಿ ಸಂಪಾದಿಸಿದ್ದಾರೆ.
ಹಣೆಬರಹ ಬದಲಿಸಿದ ಡ್ರೀಮ್ 11:ಆಟೋ ಚಾಲಕ ನೌಶಾದ್ ಅನ್ಸಾರಿ ಡ್ರೀಮ್-11 ಐಪಿಎಲ್ ತಂಡದಲ್ಲಿ ಕೇವಲ 39 ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು. ಇದರಲ್ಲಿ 1 ಕೋಟಿ ರೂಪಾಯಿಗಳ ಮೊತ್ತವನ್ನು ಗೆದ್ದಿದ್ದಾರೆ. ಐಪಿಎಲ್ ಹೇಗೆ ಕ್ರಿಕೆಟ್ ಆಟಗಾರರ ಹಣೆಬರಹವನ್ನು ಬದಲಿಸುತ್ತದೆಯೋ ಅದೇ ರೀತಿ ಆಟೋ ಚಾಲಕನ ಹಣೆಬರಹವನ್ನು ಕ್ಷಣಮಾತ್ರದಲ್ಲಿ ಬದಲಿಸಿದೆ. ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ನೌಶಾದ್ ಅವರು ತಮ್ಮ ತಂಡವನ್ನು ಡ್ರೀಮ್-11 ನಲ್ಲಿ ರಚಿಸಿದ್ದರು. ಇದಕ್ಕೆ ಬಂಪರ್ ಲಾಟರಿ ಬಂದಿದೆ. ಆಟೋ ಚಾಲಕನೆಯಿಂದ ದಿನಕ್ಕೆ 400 ರೂ.ನಂತೆ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಅದೃಷ್ಟ ಖುಲಾಯಿಸಿದ್ದು ಕೋಟಿ ಹಣ ಅವರ ಜೇಬಿಗಿಳಿದಿದೆ.