ಪೂಂಚ್(ಜಮ್ಮು ಕಾಶ್ಮೀರ):ಭದ್ರತಾ ಪಡೆಗಳಿಗೆ ಜಮ್ಮು ಕಾಶ್ಮೀರದಲ್ಲಿ ದೊಡ್ಡ ಯಶಸ್ಸು ಸಿಕ್ಕಿದೆ. ಪೂಂಚ್ ಜಿಲ್ಲೆಯ ಶೋಧ ಕಾರ್ಯಾಚರಣೆಯೊಂದರಲ್ಲಿ ಓರ್ವನನ್ನು ಬಂಧಿಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ಜಪ್ತಿ ಮಾಡಲಾಗಿದೆ.
ಪೂಂಚ್ ಜಿಲ್ಲೆಯ ಕಿರ್ನಿ ಗ್ರಾಮದ ಕೆಲವರು ಜನರು ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಭದ್ರತಾ ಪಡೆಗಳು ದಾಳಿ ನಡೆಸಿದ್ದವು. ಪೂಂಚ್ನ ಎಸ್ಎಸ್ಪಿ ಪೂಂಚ್ ಡಾ.ವಿನೋದ್ ಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಡಿಎಸ್ಪಿ ಮುನೀಶ್ ಶರ್ಮಾ ನೇತೃತ್ವದಲ್ಲಿ ಭದ್ರತಾ ಪಡೆಗಳು ಸ್ಥಳಕ್ಕೆ ಭೇಟಿ ನೀಡಿದ್ದವು.
ಇದೇ ವೇಳೆ, ಕಿರ್ನಿ ನಿವಾಸಿಯಾದ ಜಹಾಂಗೀರ್ ಅಲಿ ಪುತ್ರ ವಾಲಿ ಮೊಹಮ್ಮದ್ನನ್ನು ವಶಕ್ಕೆ ಪಡೆಯಲಾಗಿದೆ. ಮೊಹಮ್ಮದ್ನನ್ನು ಪರಿಶೀಲನೆ ನಡೆಸಿದಾಗ 2 ಪಿಸ್ತೂಲುಗಳು, 4 ಚೀನಾದ ಗ್ರೆನೇಡ್ ಗಳು, 100 ಬುಲೆಟ್ಗಳು, 4 ಪಿಸ್ತೂಲ್ ಮ್ಯಾಗಜೀನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಮೊಹಮ್ಮದ್ನನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಸೂರನ್ಕೋಟ್ನ ಬಷಾರತ್ ಖಾನ್ ಮತ್ತು ಸಂಗ್ಲಾ ಸೂರನ್ಕೋಟ್ನ ಶೆರಾಜ್ ಎಂಬುವವರಿಗೆ ಶಸ್ತ್ರಗಳನ್ನು ಪೂರೈಸಲು ತೆರಳುತ್ತಿದ್ದಾಗಿ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಹಲವಾರು ಸ್ಥಳಗಳಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ:ಕತ್ತಿನ ಬಳಿ ಚಾಕು ಇರಿಸಿ ಬಾಲಿವುಡ್ ನಟಿ ಮನೆಯಲ್ಲಿ ದರೋಡೆ