ನವದೆಹಲಿ: ದೇಶದಲ್ಲಿ ಕೋವಿಡ್ -19 ಲಸಿಕೆ ಉತ್ಪಾದನೆ ಹೆಚ್ಚಿಸಲು ತಯಾರಕರಿಗೆ ಆರ್ಥಿಕ ನೆರವು ನೀಡುವ ಸರ್ಕಾರದ ಪ್ರಯತ್ನ ಲಸಿಕೆ ತಯಾರಿಸುತ್ತಿರುವ ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಶ್ಲಾಘಿಸಿದೆ.
"ಭಾರತದಲ್ಲಿನ ಲಸಿಕೆ ಉದ್ಯಮದ ಪರವಾಗಿ, ನಿಮ್ಮ ನಿರ್ಣಾಯಕ ನೀತಿ ಬದಲಾವಣೆಗಳು ಮತ್ತು ಭಾರತದಲ್ಲಿ ಲಸಿಕೆ ಉತ್ಪಾದನೆ ಮತ್ತು ವಿತರಣೆಗೆ ಸಹಾಯ ಮಾಡುವ ತ್ವರಿತ ಆರ್ಥಿಕ ಸಹಾಯಕ್ಕಾಗಿ ಶ್ರೀ ನರೇಂದ್ರಮೋದಿ ಜಿ, ಸೀತಾರಾಮನ್ ಜಿ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಮತ್ತು ಅವರ ಕ್ರಮವನ್ನು ಶ್ಲಾಘಿಸುತ್ತೇನೆ" ಎಂದು ಎಸ್‌ಐಐ ಸಿಇಒ ಆದರ್ ಪೂನವಾಲಾ ಟ್ವೀಟ್ ಮಾಡಿದ್ದಾರೆ.