ನವದೆಹಲಿ:ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಕೋವಿಡ್ ರಾಮಬಾಣ ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿಗೊಂಡಿದ್ದು, ಈಗಾಗಲೇ ಎಲ್ಲ ರಾಜ್ಯಗಳಿಗೂ ಇದು ರವಾನೆಯಾಗಿದೆ.
ಕೋವಿಶೀಲ್ಡ್ ಲಸಿಕೆ ರವಾನೆಯಾಗುವುದಕ್ಕೂ ಮುಂಚಿತವಾಗಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಭಾವನಾತ್ಮಕ ಟ್ವೀಟ್ ಶೇರ್ ಮಾಡಿದ್ದಾರೆ. ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಪ್ರಯತ್ನಿಸಿರುವ ಪ್ರತಿ ಸಿಬ್ಬಂದಿಯ ಫೋಟೋ ಒಂದೇ ಗ್ರೂಪ್ನಲ್ಲಿದ್ದು, ಮತ್ತೊಂದು ಛಾಯಾಚಿತ್ರದಲ್ಲಿ ಅದಾರ್ ಪೂನಾವಾಲಾ ಟ್ರಕ್ನಲ್ಲಿ ಕುಳಿತುಕೊಂಡಿದ್ದಾರೆ. ಅದರಲ್ಲಿ ಕೋವಿಶೀಲ್ಡ್ ಲಸಿಕೆ ಸಾಗಣೆಯ ಪೆಟ್ಟಿಗೆಗಳಿವೆ.