ಜಲಗಾಂವ್ :ಕ್ರೂಸ್ ಹಡಗು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಗಾಂವ್ನ ಎಥಿಕಲ್ ಹ್ಯಾಕರ್ ಒಬ್ಬರು ಮುಂಬೈ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು, ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ.
ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದ ಆರೋಪಿಯ ತಂದೆ, ಬಾಲಿವುಡ್ ನಟ ಶಾರೂಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರ ಮೊಬೈಲ್ CDR(Call Detail Record) ಅನ್ನು ಅಳಿಸಿ ಹಾಕಲು ಆಮಿಷವೊಡ್ಡಲಾಗಿತ್ತು ಎಂದು ಎಥಿಕಲ್ ಹ್ಯಾಕರ್ ಮನೀಶ್ ಭಂಗಲೆ ಹೇಳಿಕೊಂಡಿದ್ದಾರೆ.
ಅಕ್ಟೋಬರ್ 6ರಂದು ಜಲಗಾಂವ್‌ನಲ್ಲಿ ಅಲೋಕ್ ಜೈನ್ ಮತ್ತು ಶೈಲೇಶ್ ಚೌಧರಿ ತಮ್ಮನ್ನು ಭೇಟಿಯಾಗಿದ್ದರು. ಈ ವೇಳೆ ಪೂಜಾ ದದ್ಲಾನಿ ಅವರ CDR ಅನ್ನು ಅಳಿಸಿ ಹಾಕಲು ಕೇಳಿದರು. ಅಲ್ಲದೇ, ಅವರು ನನಗೆ ವಾಟ್ಸ್‌ಆ್ಯಪ್ ಚಾಟ್‌ನ ಬ್ಯಾಕಪ್ ಅನ್ನು ಸಹ ತೋರಿಸಿದರು. ಅದು ಆರ್ಯನ್ ಖಾನ್ ಎಂಬ ಹೆಸರಿನಲ್ಲಿ ಸೇವ್ ಮಾಡಲಾಗಿತ್ತು. ಈ ಕೆಲಸ ಮಾಡಿದರೆ 5 ಲಕ್ಷ ರೂಪಾಯಿ ಸಿಗುತ್ತದೆ ಎಂದು ನನಗೆ ಹೇಳಿದರು ಎಂದು ಭಂಗಲೆ ಪತ್ರದಲ್ಲಿ ಬರೆದಿದ್ದಾರೆ.