ಮೇಲ್ಬೋರ್ನ್: ಆಸ್ಟ್ರೇಲಿಯಾದ ಓಪನರ್ ಹಾಗೂ ಎಡಗೈ ಬ್ಯಾಟ್ಸ್ಮಾನ್ ಡೇವಿಡ್ ವಾರ್ನರ್ ಸತತ ವೈಫಲ್ಯವನ್ನು ಎದುರಿಸುತ್ತಿದ್ದು, ಆಶಸ್ ಸರಣಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಆಸೀಸ್ನ ಮಾಜಿ ನಾಯಕ ರಿಕಿ ಪಾಂಟಿಂಗ್ ಆತಂಕ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ದೀರ್ಘಕಾಲದ ವೈಫಲ್ಯವನ್ನು ಎದುರಿಸುತ್ತಿರುವ ವಾರ್ನರ್, ಅವರ ಆಶಯದಂತೆ ಟೆಸ್ಟ್ ವೃತ್ತಿಜೀವನ ಕೊನೆಗೊಳ್ಳಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 36 ವರ್ಷದ ವಾರ್ನರ್ ಆಶಸ್ ಸರಣಿಯ ತಂಡದಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿದ್ದಾರೆ. ಅಲ್ಲದೇ ಅವರ ಇಚ್ಚೆಯಂತೆ ಟೆಸ್ಟ್ ಜೀವನ ಕೊನೆಗೊಳ್ಳಲು ಎಂದು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಇನ್ನು ಭಾರತಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ವೇಳೆ ಮೊಳಕೈ ಮೂಳೆ ಮುರಿತಕ್ಕೊಳಗಾದ ವಾರ್ನರ್ ಸರಣಿಯಿಂದ ಹೊರಬಿದ್ದರು. ಈ ಸರಣಿಯಲ್ಲಿ ಮೂರು ಇನ್ನಿಂಗ್ಸ್ಗಳನ್ನು ಆಡಿದ ವಾರ್ನರ್ ಅವರ ಬ್ಯಾಟ್ನಿಂದ ಕೇವಲ 26 ರನ್ಗಳು ಮಾತ್ರ ಹರಿದು ಬಂದಿದ್ದವು. ಅಲ್ಲದೇ 2019ರಲ್ಲಿ ಆಶಸ್ ಸರಣಿಯಲ್ಲಿ ವಾರ್ನರ್ ಕೇವಲ 9.5 ಸರಾಸರಿಯಲ್ಲಿ ರನ್ಗಳಿಸಿದ್ದರು ಎಂದು ಹೇಳಿದರು. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ವಾರ್ನರ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಬೇಕಿತ್ತು. ಇದು ಅವರ 100 ನೇ ಪಂದ್ಯವೂ ಆಗಿತ್ತು. ಅಥವಾ ಸಿಡ್ನಿಯಲ್ಲಿ ಅವರ ತವರು ಮೈದಾನದಲ್ಲಿ ನಡೆದ 101ನೇ ಪಂದ್ಯದಲ್ಲಾದರೂ ಅವರು ಟೆಸ್ಟ್ಗೆ ನಿವೃತ್ತಿ ಘೋಷಿಸ ಬೇಕಿತ್ತು ಎಂದು ಹೇಳಿದರು.