ಕರ್ನಾಟಕ

karnataka

ETV Bharat / bharat

ಕೊಲ್ಹಾಪುರದ ಈ ಗ್ರಾಮದಲ್ಲಿ ಪತ್ತೆಯಾಗಿದೆ ಪುರಾತನ ಕೊಳ.! - Karvir Tahsil

ಸುತ್ತಮುತ್ತಲಿನ ಹಳ್ಳಿಗಳು ಹಾಗೂ ಕೊಳಗಳ ಸಂಯೋಜನೆಯು ದೇವಸ್ಥಾನ ಇದ್ದಿರಬಹುದೆಂಬುದಕ್ಕೆ ಪುಷ್ಠಿ ನೀಡುತ್ತದೆ. ಈ ಕೊಳವನ್ನು ಯಾವ ಅವಧಿಯಲ್ಲಿ ನಿರ್ಮಿಸಲಾಗಿದೆ, ಅದರ ಮಾಹಿತಿಯನ್ನು ಇನ್ನೂ ಪಡೆಯಲಾಗಿಲ್ಲ.

Pond in Karvir Tahsil
Pond in Karvir Tahsil

By

Published : May 17, 2021, 9:22 PM IST

ಕೊಲ್ಹಾಪುರ(ಮಹಾರಾಷ್ಟ್ರ): ನಗರದಿಂದ ಸುಮಾರು 20 ಕಿ.ಮೀಟರ್ ದೂರದಲ್ಲಿರುವ ಕಾರ್ವೀರ್ ತಹಸಿಲ್​ನ ವಕ್ರೆ ಗ್ರಾಮದಲ್ಲಿ ಪುರಾತನ ಕೊಳವೊಂದು ಪತ್ತೆಯಾಗಿದೆ.

ವಕ್ರೆ ಗ್ರಾಮದಲ್ಲಿ ಸೌರಶಕ್ತಿ ಯೋಜನೆಗಾಗಿ ಕಾಮಗಾರಿ ಆರಂಭಿಸಲಾಗುತ್ತಿತ್ತು. ಆ ಸಮಯದಲ್ಲಿ, ಜೌಗು ಪ್ರದೇಶದಲ್ಲಿ ಕೊಳದ ರಚನೆ ಕಾಣಿಸಿಕೊಂಡಿತು. ತಕ್ಷಣ ಪ್ರಾಚೀನ ಇಲಾಖೆಗೆ ಸುದ್ದಿ ಮುಟ್ಟಿಸಲಾಯಿತು.

ಸ್ಥಳಕ್ಕೆ ಭೇಟಿ ನೀಡಿದ ಅವರು ಜೆಸಿಬಿ ಯಂತ್ರದೊಂದಿಗೆ ಕೆಲಸ ಮಾಡದಂತೆ ಸೂಚಿಸಿದರು. ಬಳಿಕ ತಮ್ಮದೇ ಆದ ರೀತಿಯಲ್ಲಿ ಅಗೆಯಲು ಪ್ರಾರಂಭಿಸಿದರು. ಸುಮಾರು 20 ಸಾವಿರ ಜೌಗು ಪ್ರದೇಶಗಳನ್ನು ಸ್ವಚ್ಚಗೊಳಿಸಿದ ಬಳಿಕ ಪ್ರಾಚೀನ ಕೊಳವೊಂದು ಕಂಡು ಬಂದಿದೆ.

ಇಲ್ಲಿಯವರೆಗೆ ಕೇವಲ 25 ಪ್ರತಿಶತದಷ್ಟು ಕೆಲಸಗಳು ಮಾತ್ರ ನಡೆದಿವೆ ಎಂದು ಪ್ರಾಚೀನ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಇನ್ನೂ 75 ಪ್ರತಿಶತ ಕೆಲಸವಿದೆ. ಈ ಪ್ರಾಚೀನ ಕೊಳದಿಂದ ಕೆಲವು ವಿಷಯಗಳು ಹೊರಬರುತ್ತಿದೆ. ಗ್ರಾಮಸ್ಥರು ಹೇಳಿಕೆ ಪ್ರಕಾರ ಇಲ್ಲಿ ದೇವಾಲಯವೂ ಇದ್ದಿರಬಹುದು ಎಂದು ಹೇಳುತ್ತಾರೆ.

ಸುತ್ತಮುತ್ತಲಿನ ಹಳ್ಳಿಗಳು ಹಾಗೂ ಕೊಳಗಳ ಸಂಯೋಜನೆಯು ದೇವಸ್ಥಾನ ಇದ್ದಿರಬಹುದೆಂಬುದಕ್ಕೆ ಪುಷ್ಠಿ ನೀಡುತ್ತದೆ. ಈ ಕೊಳವನ್ನು ಯಾವ ಅವಧಿಯಲ್ಲಿ ನಿರ್ಮಿಸಲಾಗಿದೆ, ಅದರ ಮಾಹಿತಿಯನ್ನು ಇನ್ನೂ ಪಡೆಯಲಾಗಿಲ್ಲ.

ABOUT THE AUTHOR

...view details