ಕರ್ನಾಟಕ

karnataka

ETV Bharat / bharat

ಪಂಚ ರಾಜ್ಯಗಳಲ್ಲಿ ತೀವ್ರ ಮುಖಭಂಗ.. ಈ ರೀತಿ ಟ್ವೀಟ್ ಮಾಡಿದ ಕಾಂಗ್ರೆಸ್​​ - ಕಾಂಗ್ರೆಸ್​ ಟ್ವೀಟ್

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್​ ಮುಖಭಂಗಕ್ಕೊಳಗಾಗಿದ್ದು, ಇದರ ಬೆನ್ನಲ್ಲೇ ಟ್ವೀಟರ್​​ನಲ್ಲಿ ರಾಹುಲ್ ಗಾಂಧಿ ಮಾತನಾಡಿರುವ ವಿಡಿಯೋ ತುಣುಕವೊಂದನ್ನ ಹಂಚಿಕೊಂಡಿದೆ.

Congress Tweet Rahul Gandhi speech
Congress Tweet Rahul Gandhi speech

By

Published : Mar 10, 2022, 2:27 PM IST

ನವದೆಹಲಿ:ಉತ್ತರ ಪ್ರದೇಶ, ಪಂಜಾಬ್​ ಸೇರಿದಂತೆ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್​ ತೀವ್ರ ನಿರಾಸೆಗೊಳಗಾಗಿದ್ದು, ಹೊರಬಿದ್ದಿರುವ ಫಲಿತಾಂಶ ಕೈ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನಾಡಿರುವ ವಿಡಿಯೋ ತುಣುಕವೊಂದನ್ನು ತಮ್ಮ ಟ್ವಿಟರ್​​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದ್ದು, ಕ್ರೀಡೆ, ಸ್ಪರ್ಧೆ ಹಾಗೂ ಹೋರಾಟದ ಬಗ್ಗೆ ಈ ವಿಡಿಯೋ ಇದೆ.

ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಏನಿದೆ?: ಕ್ರೀಡಾ ಸ್ಪರ್ಧೆಯಲ್ಲಿ ಭಾಗಿಯಾದಾಗ ಮೊದಲು ನಮ್ಮೊಳಗಿರುವ ಭಯದ ವಿರುದ್ಧ ಹೋರಾಡುತ್ತೇವೆ. ನಮ್ಮೊಳಗಿರುವ ಭಯದ ಅನುಭವ ಚೆನ್ನಾಗಿ ತಿಳಿದುಕೊಳ್ಳಲು ಕ್ರೀಡೆ ನಿಜವಾಗಿ ಅತ್ಯುತ್ತಮವಾದ ವೇದಿಕೆಯಾಗಿದೆ ಎಂದಿದ್ದಾರೆ. ಇದರ ವಿಡಿಯೋ ತುಣುಕವೊಂದನ್ನ ಕಾಂಗ್ರೆಸ್ ಇದೀಗ ಹಂಚಿಕೊಂಡಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಪಂಜಾಬ್​​ದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದ ಕಾಂಗ್ರೆಸ್​ಗೆ ನಿರಾಸೆಯಾಗಿದ್ದು, ಎಲ್ಲ ರಾಜ್ಯಗಳಲ್ಲೂ ಕಳಪೆ ಪ್ರದರ್ಶನ ತೋರಿದೆ. ಪಂಚರಾಜ್ಯಗಳ ಚುನಾವಣೆ ಪೈಕಿ ಉತ್ತರ ಪ್ರದೇಶದಲ್ಲಿ ಬಿಜೆಪಿ 261 ಕ್ಷೇತ್ರ, ಸಮಾಜವಾದಿ ಪಕ್ಷ 136, ಬಿಎಸ್​ಪಿ, ಕಾಂಗ್ರೆಸ್ ತಲಾ 2 ಸ್ಥಾನದಲ್ಲಿ ಮುನ್ನಡೆಯಲಿದ್ದು, ಇತರ 4 ಸ್ಥಾನದಲ್ಲಿ ಮುಂದಿವೆ. ಪಂಜಾಬ್​​ನಲ್ಲಿ ಎಎಪಿ 92, ಕಾಂಗ್ರೆಸ್​​ 19, ಬಿಜೆಪಿ 2 ಸ್ಥಾನದಲ್ಲಿ ಮುಂದಿದೆ. ಇತ್ತ ಉತ್ತರಾಖಂಡದಲ್ಲಿ ಬಿಜೆಪಿ 47, ಕಾಂಗ್ರೆಸ್​​ 20 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿದ್ದು, ಗೋವಾದಲ್ಲಿ ಬಿಜೆಪಿ 18, ಕಾಂಗ್ರೆಸ್​​ 15 ಹಾಗೂ ಟಿಎಂಸಿ 3 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿದೆ.

ಇದನ್ನು ಓದಿ:ರಾಮನಗರದ ಆ ಪ್ರಭಾವಿ ನಾಯಕನಾದರೂ ಯಾರು?: ಯತ್ನಾಳ್​ ಪ್ರಶ್ನೆಗೆ ಹೆಚ್​ಡಿಕೆ ಹೇಳಿದ್ದೇನು?

ABOUT THE AUTHOR

...view details