ಜಾಜ್‌ಪುರ(ಒಡಿಶಾ): ಪಂಚಾಯತ್ ಚುನಾವಣೆಯ 3ನೇ ಹಂತದ ಮತದಾನದ ವೇಳೆ ಮೂವರು ಪತ್ರಕರ್ತರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಜಾಜ್‌ಪುರ ಜಿಲ್ಲೆಯಲ್ಲಿ ಜರುಗಿದೆ.
ಬಚ್ಚಾಲ ಪಂಚಾಯತ್‌ನಲ್ಲಿ ಮತಪೆಟ್ಟಿಗೆಗಳನ್ನು ಲೂಟಿ ಮಾಡಿದ ಆರೋಪದ ಬಗ್ಗೆ ವರದಿ ಮಾಡಲು ಪತ್ರಕರ್ತರು ಹೋದಾಗ ಈ ಘಟನೆ ನಡೆದಿದೆ. ಇದೇ ವೇಳೆ ಕೆಲ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ದುಷ್ಕರ್ಮಿಗಳು ಪತ್ರಕರ್ತರ ವಾಹನವನ್ನೂ ಜಖಂಗೊಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ.
ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ ಇದನ್ನೂ ಓದಿ: ವಚನಾನಂದ ಶ್ರೀಗಳು ನೀಡಿದ ಬೆಳ್ಳಿ ಗದೆಯನ್ನು ಆಂಜನೇಯನಿಗೆ ಅರ್ಪಿಸಿದ ಸಿಎಂ
ಏನಿದು ಘಟನೆ?:ಜಜ್‌ಪುರ ಜಿಲ್ಲೆಯ ಬಿಂಜರ್‌ಪುರ ಬ್ಲಾಕ್‌ನ ಬಚಾಲಾ ಪಂಚಾಯತ್‌ನ ಬೂತ್ ಸಂಖ್ಯೆ 4 ಮತ್ತು 6ರಲ್ಲಿ ಭಾನುವಾರ ದುಷ್ಕರ್ಮಿಗಳು ಎರಡು ಮತ ಪೆಟ್ಟಿಗೆಗಳನ್ನು ಲೂಟಿ ಮಾಡಿದ್ದರು. ಈ ಮೂಲಕ ಒಡಿಶಾ ಪಂಚಾಯತ್ ಚುನಾವಣೆಯಲ್ಲಿ ಭದ್ರತಾ ವ್ಯವಸ್ಥೆಯಲ್ಲಿನ ಲೋಪ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ.