ಮುಂಬೈ: ಮಹಾರಾಷ್ಟ್ರದಲ್ಲಿನ ಕೆಲವು ರಸ್ತೆಗಳ, ಕಾಲೋನಿಗಳ ಹಾಗೂ ನಗರಗಳ ಹೆಸರನ್ನು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಾನಾ ಶಂಕರ್‌ಶೇಠ್ ಸ್ಟೇಷನ್ ಆಗಿ ಬದಲಾಗಲಿದೆ ಮುಂಬೈ ರೈಲು ನಿಲ್ದಾಣ:
ರಾಜ್ಯದ ರಾಜಧಾನಿ ಮುಂಬೈ ಆಗಿದ್ದು ದೇಶದ ಆರ್ಥಿಕ ರಾಜಧಾನಿ ಎಂದೂ ಕರೆಸಿಕೊಳ್ಳುತ್ತದೆ. ಹಾಗೆಯೇ ರೈಲ್ವೆ ಸಾರಿಗೆಯು ನಗರದಲ್ಲಿ ವಿಶಿಷ್ಟವಾದ ಮಹತ್ವವನ್ನು ಹೊಂದಿದೆ. ಪಶ್ಚಿಮ ರೈಲ್ವೆಯ ಮುಖ್ಯ ನಿಲ್ದಾಣವಾದ ಮುಂಬೈ ಸೆಂಟ್ರಲ್ ಅನ್ನು ಈಗ ಮರುನಾಮಕರಣ ಮಾಡಲಾಗುತ್ತಿದೆ. ಈ ನಿಲ್ದಾಣ ನಾನಾ ಶಂಕರ್‌ಶೇಠ್ ನಿಲ್ದಾಣವಾಗಿ ಬಲಾಗುತ್ತಿದೆ. ಈ ಸಂಬಂಧ ದಕ್ಷಿಣ ಮುಂಬೈ ಸಂಸದ ಅರವಿಂದ ಸಾವಂತ್ ಕೇಂದ್ರಕ್ಕೆ ಪತ್ರ ಬರೆದು ಹೆಸರು ಬದಲಾವಣೆಗೆ ಸೂಚಿಸಿದ್ದರು. ಈಗ ರೈಲ್ವೆ ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ಶೀಘ್ರದಲ್ಲೇ ನಾನಾ ಶಂಕರ್‌ಶೇಠ್ ಅವರ ಹೆಸರಿನ ಬೋರ್ಡ್ ಇಲ್ಲಿ ಕಾಣಸಿಗಲಿದೆ.
ನಾನಾ ಶಂಕರ್ ಶೇಠ್ ಯಾರು?
ನಾನಾ ಶಂಕರ್ ಶೇಠ್ 1803 ರ ಫೆಬ್ರವರಿ 10 ರಂದು ಮುಂಬೈ ಬಳಿಯ ಮುರ್ಬಾದ್‌ನಲ್ಲಿ ಜನಿಸಿದವರು. ನಾನಾ ಅವರ ನಿಜವಾದ ಹೆಸರು ಜಗನ್ನಾಥ್ ಮುರ್ಕುಟೆ. ಇವರದು ಬಹಳ ಶ್ರೀಮಂತ ಕುಟುಂಬ. ನಾನಾ ಅವರನ್ನು 19 ನೇ ಶತಮಾನದ ಶ್ರೇಷ್ಠ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರೆಂದು ಕರೆಯಲಾಗುತ್ತಿತ್ತು. ನಾನಾ ತಮ್ಮ ಆಸ್ತಿಯ ಬಹುಪಾಲು ಭಾಗವನ್ನು ನಗರದ ಅಭಿವೃದ್ಧಿಗೆ ದಾನ ಮಾಡಿದ್ದರು.