ವಾರಾಣಸಿ( ಉತ್ತರಪ್ರದೇಶ): ನಾಳೆ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಅಭ್ಯರ್ಥಿಗಳ ಭವಿಷ್ಯ ಮಧ್ಯಾಹ್ನದ ವೇಳೆಗೆ ಬಹುತೇಕ ಸ್ಪಷ್ಟವಾಗಲಿದೆ. ಈ ನಡುವೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾರಿನಲ್ಲಿ ಇವಿಎಂ ಸಾಗಿಸಲಾಗಿದೆ ಎಂಬ ಸುದ್ದಿ ನಿನ್ನೆ ಇಡೀ ರಾತ್ರಿ ಎಸ್ಪಿ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಮುಂದೆ ಪ್ರತಿಭಟನೆ ಮಾಡುವಂತಾಗಿದೆ.
ವಾಹನದಲ್ಲಿ ಇವಿಎಂ ಯಂತ್ರಗಳನ್ನು ಸಾಗಿಸಿದ ಆರೋಪ ಕೇಳಿ ಬರುತ್ತಿದ್ದಂತೆ ಇದನ್ನು ಖಂಡಿಸಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ವಾರಾಣಸಿಯ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ನಗರದ ವಿವಿಧ ಭಾಗಗಳಲ್ಲಿ ಗದ್ದಲಕ್ಕೂ ಕಾರಣವಾಯಿತು.
ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್, ಬಿಜೆಪಿ ಇವಿಎಂಗಳನ್ನು ತಿರುಚುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ವಾರಣಾಸಿ ವಾರಾಣಸಿಆಡಳಿತ ಪ್ರತಿಕ್ರಿಯೆ ನೀಡಿದ್ದು, ವಾಹನಗಳಲ್ಲಿ ಸಾಗಿಸಿದ ಇವಿಎಂಗಳಿಗೂ ಸ್ಟ್ರಾಂಗ್ ರೂಮ್‌ಗಳಿಗೆ ಯಾವುದೇ ಸಂಬಂಧ ಇಲ್ಲ. ತರಬೇತಿಗೆ ಬಳಕೆಯಾಗಿದ್ದ ಇವಿಎಂಗಳನ್ನು ಸಾಗಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಇದನ್ನು ಒಪ್ಪದ ಎಸ್ಪಿ ಕಾರ್ಯಕರ್ತರು ಇಡೀ ರಾತ್ರಿ ವಿವಿಧ ಪ್ರದೇಶಗಳಲ್ಲಿ ಗದ್ದಲ ಸೃಷ್ಟಿಸಿದ್ದಾರೆ. ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.