ಬೆಟ್ಟಿಯಾ(ಬಿಹಾರ): ರಾಜಕೀಯ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ಅವರು ಸ್ವತಃ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ಆದರೆ ತವರು ರಾಜ್ಯ ಬಿಹಾರಕ್ಕೆ ಉತ್ತಮ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅಥವಾ ನಿರ್ಮಿಸುವ ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಪುನರುಚ್ಚರಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತನ್ನನ್ನು ರಾಜಕೀಯ ಚಾಣಾಕ್ಷತನವಿಲ್ಲದ "ದಂಧೆಬಾಜ್" (ವ್ಯಾಪಾರಿ) ಎಂದು ಆರೋಪಿಸಿದ್ದ ಜೆಡಿಯು ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, "ರಾಜಕೀಯಕ್ಕೆ ಬರಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಯಾಕೆ ನನ್ನನ್ನು ತಡೆದರು ಎಂದು ಅವರನ್ನೇ ಪ್ರಶ್ನಿಸಲಿ" ಎಂದು ಸವಾಲು ಹಾಕಿದರು.
ಜನ್ ಸುರಾಜ್ ಪಾದಯಾತ್ರೆ:ನಾನು ಚುನಾವಣೆಗೆ ಏಕೆ ಸ್ಪರ್ಧಿಸಬೇಕು? ಅಂಥ ಯಾವುದೇ ವಿಚಾರಗಳು ನನ್ನಲ್ಲಿಲ್ಲ ಎಂದು ತಾವು I-PAC ಸಂಸ್ಥಾಪಕರು, ಸ್ವತಃ ಚುನಾವಣಾ ಅಖಾಡಕ್ಕೆ ಧುಮುಕಲು ಯೋಜಿಸುತ್ತಿದ್ದೀರಾ ಎಂದು ಪದೇ ಪದೇ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.