ಕರ್ನಾಟಕ

karnataka

ETV Bharat / bharat

ಪಶ್ಚಿಮ ಬಂಗಾಳ ಚುನಾವಣೆ ವೇಳೆ ಹೆಚ್ಚು ಹಿಂಸಾಚಾರ ಸಾಧ್ಯತೆ : ರಾಜಕೀಯ ವಿಶ್ಲೇಷಕರ ಭವಿಷ್ಯ - 2019ರ ಲೋಕಸಭಾ ಚುನಾವಣೆ

ಪಶ್ಚಿಮ ಬಂಗಾಳ ಚುನಾವಣಾ ಕಾರ್ಯಪಡೆ ಮತ್ತು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್​ ನಡೆಸಿದ ಜಂಟಿ ಅಧ್ಯಯನವೊಂದರ ವರದಿಯಂತೆ ಶೇಕಡಾ 37ರಷ್ಟು ಅಂದರೆ 104 ಶಾಸಕರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ.

Political pundits predict more violence in Bengal before Assembly elections
ಪಶ್ಚಿಮ ಬಂಗಾಳ ಚುನಾವಣೆ ವೇಳೆ ಹೆಚ್ಚು ಹಿಂಸಾಚಾರ ಸಾಧ್ಯತೆ : ರಾಜಕೀಯ ವಿಶ್ಲೇಷಕರ ಭವಿಷ್ಯ

By

Published : Mar 5, 2021, 5:30 AM IST

ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳಿಗೆ ಅಖಾಡ ಸಿದ್ಧವಾಗಿದೆ. ಈ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ 2019ರ ಲೋಕಸಭಾ ಚುನಾವಣೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ವರದಿಯೊಂದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.

2019ರ ಲೋಕಸಭಾ ಚುನಾವಣೆಯ ವೇಳೆ 693 ಹಿಂಸಾಚಾರಗಳು ನಡೆದು, ಸುಮಾರು 11 ಮಂದಿ ಸಾವನ್ನಪ್ಪಿದ್ದು, ಈಗ ಎದುರಿಸಲಿರುವ ಚುನಾವಣೆ ಮತ್ತಷ್ಟು ಗಂಭೀರವಾಗಲಿದೆ ಎನ್ನಲಾಗಿದೆ. ಇದರಿಂದಾಗಿ ಎಲ್ಲಾ ಪಕ್ಷಗಳು ಈ ಬಗ್ಗೆ ಯೋಚನೆ ಮಾಡಬೇಕಿದೆ.

ರಾಜಕೀಯ ವಿಶ್ಲೇಷಕ ಸುರೇಶ್ ಬೋಫ್ನಾ

ಈ ಬಗ್ಗೆ ಮಾತನಾಡಿದ ರಾಜಕೀಯ ವಿಶ್ಲೇಷಕ ಸುರೇಶ್ ಬೋಫ್ನಾ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಘರ್ಷ ನಿಜಕ್ಕೂ ಆತಂಕಕಾರಿ. ಮುಂದಿನ ವಿಧಾನಸಭಾ ಚುನಾವಣೆಯ ಶಾಂತಿಯುತವಾಗಿರಬೇಕೆಂಬುದು ಚುನಾವಣೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರ ಕಾಳಜಿಯಾಗಿರಬೇಕು. ಆದರೆ ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ. ಮುಂದಿನ ಭವಿಷ್ಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಗೃಹ ಇಲಾಖೆಯ ಮಾಹಿತಿಯಂತೆ ಹಿಂದಿನ ವರ್ಷ ಸುಮಾರು 663 ರಾಜಕೀಯ ಹಿಂಸಾಚಾರದ ಘಟನೆಗಳು ಬಂದಿದೆ. ಈ ಘಟನೆಗಳಲ್ಲಿ 57 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:'ಮಹಿಳಾ ಕಾರ್ಪೊರೇಟರ್​ಗೆ ಲೈಂಗಿಕ ಕಿರುಕುಳ ಯತ್ನ, ಬಿಜೆಪಿ ಕಾರ್ಪೋರೇಟರ್ ಬಂಧನ: ಅನಿಲ್ ದೇಶ್​ಮುಖ್​​

ಈ ವರ್ಷ ಜನವರಿಯಲ್ಲಿಯೂ ಹಿಂಸಾಚಾರಗಳು ನಡೆದಿದೆ. ಜನವರಿ 1ರಿಂದ 7ರವರೆಗೆ ಸುಮಾರು 23 ರಾಜಕೀಯ ಹಿಂಸಾಚಾರಗಳು ನಡೆದಿದೆ. ಇಬ್ಬರು ಸಾವನ್ನಪ್ಪಿದ್ದು, 43 ಮಂದಿಗೆ ಗಾಯಗಳಾಗಿವೆ.

ಪಶ್ಚಿಮ ಬಂಗಾಳ ಚುನಾವಣಾ ಕಾರ್ಯಪಡೆ ಮತ್ತು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್​ ನಡೆಸಿದ ಜಂಟಿ ಅಧ್ಯಯನವೊಂದರ ವರದಿಯಂತೆ ಶೇಕಡಾ 37ರಷ್ಟು ಅಂದರೆ 104 ಶಾಸಕರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. 90 ಶಾಸಕರು ತಮ್ಮ ವಿರುದ್ಧ ಗಂಭೀರ ಅಪರಾಧಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸುರೇಶ್ ಬೋಫ್ನಾ ಹಾಲಿ ಶಾಸಕರಲ್ಲಿ ಬಹುಪಾಲು ಮಂದಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸುತ್ತಾರೆ. ಅವರು ಆಡಳಿತ ಪಕ್ಷಕ್ಕೆ ತಮ್ಮ ನಿಷ್ಠೆ ಬದಲಾಯಿಸುತ್ತಾರೆ.ಈ ಮೊದಲು ಎಡ ಪಕ್ಷಕ್ಕೆ ನಿಷ್ಠೆ ತೋರಿದ್ದು, ಈಗ ಟಿಎಂಸಿ ಕಡೆಗೆ ತಮ್ಮ ನಿಷ್ಠೆ ಬದಲಾಯಿಸಿಕೊಂಡಿದ್ದಾರೆ. ಇದು ರಾಜ್ಯ ರಾಜಕೀಯದ ಗಂಭೀರ ಸಮಸ್ಯೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಎಲ್ಲಾ ಪಕ್ಷಗಳು ಒಟ್ಟಾಗಿ ಯೋಚನೆ ಮಾಡಬೇಕು. ಆದರೆ ದುರಾದೃಷ್ಟವಶಾತ್ ಅವುಗಳು ಒಟ್ಟಾಗಿ ಚಿಂತನೆ ನಡೆಸದೇ, ವಿರುದ್ಧವಾಗಿ ಆಲೋಚಿಸುತ್ತವೆ ಎಂಬುದು ಸುರೇಶ್ ಅವರ ಅಭಿಪ್ರಾಯವಾಗಿದೆ.

ABOUT THE AUTHOR

...view details