ಕರ್ನಾಟಕ

karnataka

ETV Bharat / bharat

ಮುಂದುವರಿದ ಪಂಜಾಬ್ ರಾಜಕೀಯ ಸಮರ.. ಇಂದು ಸಂಜೆ 5ಕ್ಕೆ ಮಹತ್ವದ CLP ಸಭೆ

ಇಂದು ಸಂಜೆ ಐದು ಗಂಟೆಗೆ ಚಂಡೀಗಢದಲ್ಲಿರುವ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸಿಎಲ್​ಪಿ ಸಭೆ ನಡೆಯಲಿದೆ.

http://10.10.50.80:6060//finalout3/odisha-nle/thumbnail/18-September-2021/13097310_717_13097310_1631930559596.png
http://10.10.50.80:6060//finalout3/odisha-nle/thumbnail/18-September-2021/13097310_717_13097310_1631930559596.png

By

Published : Sep 18, 2021, 1:08 PM IST

ನವದೆಹಲಿ: ಪಂಜಾಬ್​ ಕಾಂಗ್ರೆಸ್​​ನಲ್ಲಿ ಉಲ್ಬಣಗೊಂಡಿರುವ ಬಂಡಾಯ ಶಮನವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಗೆ ಒತ್ತಾಯಿಸಿ ಶಾಸಕರು ಎಐಸಿಸಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆ, ಇಂದು ಸಂಜೆ ಐದು ಗಂಟೆಗೆ ಪಕ್ಷದ ಕಚೇರಿಯಲ್ಲಿ ಸಿಎಲ್​ಪಿ ಸಭೆ ನಡೆಯಲಿದೆ.

ತಕ್ಷಣವೇ ಪಂಜಾಬ್​​ನ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್​​​ಪಿ) ಸಭೆಯನ್ನು ಕರೆಯುವಂತೆ ಹೆಚ್ಚಿನ ಸಂಖ್ಯೆಯ ಶಾಸಕರು ಕಾಂಗ್ರೆಸ್​ ಹೈಕಮಾಂಡ್​ಗೆ ಮನವಿ ಮಾಡಿದ್ದರು. ಅದರ ಪ್ರಕಾರ ಸೆಪ್ಟೆಂಬರ್ 18, ಸಂಜೆ 5 ಗಂಟೆಗೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶಾಸಕಾಂಗ ಪಕ್ಷ ಸಭೆ ಕರೆಯಲಾಗಿದೆ.

ಈ ಸಭೆ ಆಯೋಜಿಸುವಂತೆ ಪಿಪಿಸಿಸಿಗೆ ಎಐಸಿಸಿ ನಿರ್ದೇಶಿಸಿದೆ. ಪಂಜಾಬ್​​​​ನ ಎಲ್ಲ ಕಾಂಗ್ರೆಸ್ ಶಾಸಕರು ದಯಮಾಡಿ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ ಎಂದು ಪಂಜಾಬ್ ಕಾಂಗ್ರೆಸ್​​ನ ಉಸ್ತುವಾರಿ ಹರೀಶ್ ರಾವತ್ ಟ್ವೀಟ್ ಮಾಡಿದ್ದಾರೆ.

ಎಐಸಿಸಿ ನಿರ್ದೇಶನದ ಪ್ರಕಾರ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಚಂಡೀಗಡದಲ್ಲಿರುವ ಪಂಜಾಬ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸಂಜೆ 5 ಗಂಟೆಗೆ ಕರೆಯಲಾಗಿದೆ ಎಂದು ನವಜೋತ್ ಸಿಂಗ್ ಸಿಧು ಹೇಳಿದರು.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೊಹಾಲಿಯಲ್ಲಿರುವ ತಮ್ಮ ನಿವಾಸದಲ್ಲಿ ಸಿಎಂ ತಮ್ಮ ನಿಷ್ಠಾವಂತ ಶಾಸಕರನ್ನು ಭೇಟಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

40 ಶಾಸಕರಿಂದ ಸೋನಿಯಾ ಪತ್ರ

ಕಳೆದ ಹಲವು ವರ್ಷಗಳಿಂದ ಪಂಜಾಬ್​ ಕಾಂಗ್ರೆಸ್​ನಲ್ಲಿ ಬಿರುಕು ಮೂಡಿದೆ. ಬಂಡಾಯ ಶಮನ ಮಾಡಲು ಹೈಕಮಾಂಡ್ ಎಷ್ಟೇ ಪ್ರಯತ್ನಿಸಿದರೂ, ಆಗುತ್ತಿಲ್ಲ. ಅಲ್ಲದೇ, ಅಂದಾಜು 40 ಕ್ಕೂ ಹೆಚ್ಚು ಶಾಸರು ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಗೆ ಪತ್ರ ಬರೆದಿದ್ದರು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ವಿಷಯದ ಬಗ್ಗೆಯೂ ಇಂದು ಸಿಎಲ್​ಪಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎನ್ನಲಾಗಿದೆ.

ಕ್ಯಾಬಿನೆಟ್​ ಪುನಾರಚನೆಗೆ ಒಪ್ಪದ ಕ್ಯಾಪ್ಟನ್​

ಪಂಜಾಬ್ ಕಾಂಗ್ರೆಸ್​ ಘಟಕದ ಅಧ್ಯಕ್ಷರನ್ನಾಗಿ ನವಜೋತ್ ಸಿಂಗ್ ಸಿಧು ಅವರನ್ನು ನೇಮಿಸಿದ ಬಳಿಕ, ಕ್ಯಾಬಿನೆಟ್ ಪುನರ್​ ರಚನೆಗೆ ಮುಂದಾದರು. ಆದರೆ, ಎರಡು ವಾರಗಳ ಹಿಂದೆ ಸಿಎಂ ಅಮರಿಂದರ್ ಸಿಂಗ್​​ ಹರೀಶ್ ರಾವತ್​​ರನ್ನು ಭೇಟಿ ಮಾಡಿ, ಸಂಪುಟ ಪುನರ್ ರಚನೆಗೆ ಅವಕಾಶ ಕೊಡದಂತೆ ಮನವಿ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸೇನೆ - ಬಿಜೆಪಿ ಮೈತ್ರಿ ವಿಚಾರದಲ್ಲಿ ತಮಾಷೆ ಮಾಡಿದ ಸಿಎಂ: ಬಿಜೆಪಿ ನಾಯಕ ಹೇಳಿದ್ದೇನು?

ಸದ್ಯ ಪಕ್ಷದ ಬಹುತೇಕ ಶಾಸಕರು ಸಿಧು ಪರವಾಗಿದ್ದರೆ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಪರ ಕೂಡ ಅಷ್ಟೇ ಸಂಸದರು, ಶಾಸಕರಿದ್ದಾರೆ. ಇಂದಿನ ಸಭೆ ಎರಡೂ ಕಡೆಯವರಿಗೆ ಶಕ್ತಿ ಪ್ರದರ್ಶನವಾಗಲಿದೆ. ಒಂದು ವೇಳೆ ಕ್ಯಾಬಿನೆಟ್ ಪುನಾರಚನೆಯಾದಲ್ಲಿ, ಸದ್ಯ ಸಚಿವರಾಗಿರುವವರಿಗೆ ಮುಂದಿನ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವುದಕ್ಕೆ ಟಿಕೆಟ್ ಕೂಡ ಸಿಗುವುದಿಲ್ಲ ಎಂಬ ಆತಂಕ ಶುರುವಾಗಿದೆ.

ABOUT THE AUTHOR

...view details