ಕರ್ನಾಟಕ

karnataka

ETV Bharat / bharat

ಬಂಧಿಸಲು ಬಂದ ಪೊಲೀಸನನ್ನೇ ಒತ್ತೆಯಾಳಾಗಿ ಇಟ್ಟುಕೊಂಡ ಗಾಂಜಾ ಡೀಲರ್ಸ್​​ - ಜುವರ್ ಪೊಲೀಸ್ ಠಾಣೆ

ಗಾಂಜಾ ಮಾರಾಟಗಾರರ ಬಂಧನಕ್ಕೆ ಅಡ್ಡಿಪಡಿಸಿದಾಗ ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಗ್ರೇಟರ್ ನೋಯ್ಡಾ ಡಿಸಿಪಿ ವಿಶಾಲ್ ಪಾಂಡೆ ತಿಳಿಸಿದ್ದಾರೆ. ಅಲ್ಲದೇ ಈ ವೇಳೆ ಪೊಲೀಸರ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂದಿದ್ದಾರೆ.

policemen-taken-hostage-at-greater-noida-chanchli-village
ಬಂಧಿಸಲು ಬಂದ ಪೊಲೀಸನ್ನೇ ಒತ್ತೆಯಾಳಾಗಿ ಇಟ್ಟುಕೊಂಡ ಗಾಂಜಾ ಡೀಲರ್ಸ್​​

By

Published : Jun 3, 2021, 5:24 PM IST

ನೋಯ್ಡಾ (ನವದೆಹಲಿ):ಗಾಂಜಾ ಕಳ್ಳಸಾಗಣೆ ಸುಳಿವಿನ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸ್ ಅಧಿಕಾರಿಯನ್ನೇ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡ ಘಟನೆ ಇಲ್ಲಿನ ಜುವರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಚಂಚಾಲಿ ಗ್ರಾಮದಲ್ಲಿ ಗಾಂಜಾ ಕಳ್ಳ ಸಾಗಾಣಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಗ್ರಾಮದ ಮನೆಯೊಂದಕ್ಕೆ ತೆರಳಿದ ಪೊಲೀಸರನ್ನು ಕುಟುಂಬಸ್ಥರು ತಡೆದಿದ್ದಲ್ಲದೇ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಸುತ್ತಲಿನ ಜನರು ಪೊಲೀಸ್​​​ನನ್ನು ಒತ್ತೆಯಾಳುಗಳನ್ನಾಗಿಟ್ಟುಕೊಂಡಿದ್ದ ಆರೋಪ ಕೇಳಿಬಂದಿದೆ.

ಬಂಧಿಸಲು ಬಂದ ಪೊಲೀಸನ್ನೇ ಒತ್ತೆಯಾಳಾಗಿ ಇಟ್ಟುಕೊಂಡ ಗಾಂಜಾ ಡೀಲರ್ಸ್​​

ಈ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಪರಾರಿಯಾದವರಿಗೆ ಹುಡುಕಾಟ

ಗಾಂಜಾ ಮಾರಾಟಗಾರರ ಬಂಧನಕ್ಕೆ ಅಡ್ಡಿಪಡಿಸಿದಾಗ ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಗ್ರೇಟರ್ ನೋಯ್ಡಾ ಡಿಸಿಪಿ ವಿಶಾಲ್ ಪಾಂಡೆ ತಿಳಿಸಿದ್ದಾರೆ. ಅಲ್ಲದೇ ಈ ವೇಳೆ ಪೊಲೀಸರ ಮೇಲೆಯೂ ಹಲ್ಲೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

ABOUT THE AUTHOR

...view details