ಕರ್ನಾಟಕ

karnataka

ETV Bharat / bharat

ಕರ್ನಾಟಕದ ಬೈಕರ್, ತಮಿಳುನಾಡಿನ ಪೊಲೀಸ್ : ಒಂದು ಔಷಧ ಬಾಟಲಿಯ ಹೃದಯಸ್ಪರ್ಶಿ ಕತೆ! - ಔಷಧ ಬಾಟಲಿ ಸೃಷ್ಟಿಸಿದ ಹೃದಯಸ್ಪರ್ಶಿ ಕತೆ

ಕರ್ನಾಟಕದ ಬೈಕರ್, ತಮಿಳುನಾಡಿನ ಪೊಲೀಸ್, ಔಷಧ ಬಾಟಲಿಯೊಂದು ಸ್ಫೂರ್ತಿದಾಯಕ ಕತೆಯೊಂದನ್ನು ಕಟ್ಟಿಕೊಡುತ್ತವೆ. ಮೈಸೂರಿನಲ್ಲಿ ಪೊಲೀಸರ ವಿರುದ್ಧ ಗಂಭೀರ ಆರೋಪದ ಬೆನ್ನಲ್ಲೇ ಮಾನವೀಯತೆ ತುಂಬಿದ ಹೃದಯಸ್ಪರ್ಶಿ ಘಟನೆ ನಡೆದಿದೆ..

policeman-stops-biker-midway-for-this-heartwarming-reason
ಕರ್ನಾಟಕದ ಬೈಕರ್, ತಮಿಳುನಾಡು ಪೊಲೀಸ್, ಒಂದು ಔಷಧ ಬಾಟಲಿ ಸೃಷ್ಟಿಸಿದ ಹೃದಯಸ್ಪರ್ಶಿ ಕತೆ.!

By

Published : Mar 26, 2021, 8:40 PM IST

Updated : Mar 27, 2021, 10:18 AM IST

ಚೆನ್ನೈ(ತಮಿಳುನಾಡು) :'ಏನಾದರಾಗು ಮೊದಲು ಮಾನವನಾಗು' ಎಂಬ ಕುವೆಂಪುವಾಣಿ ಅದ್ಭುತ. ಮಾನವರೆಂದ ಮೇಲೆ ಅಲ್ಲಿ ಮಾನವೀಯತೆ ಇದ್ದೇ ಇರುತ್ತದೆ. ಇದಕ್ಕೆ ಸಾಕ್ಷ್ಯ ಒದಗಿಸೋ ಸನ್ನಿವೇಶಗಳು ಅಲ್ಲಲ್ಲಿ ಸೃಷ್ಟಿಯಾಗುತ್ತವೆ. ಮನುಷ್ಯರಲ್ಲಿ ಮಾನವೀಯತೆಗೇನೂ ಕೊರತೆಯಿಲ್ಲ. ತಮಿಳುನಾಡಿನಲ್ಲಿ ನಡೆದ ಪ್ರಸಂಗವೊಂದು ಇದಕ್ಕೆ ಜೀವಂತ ನಿದರ್ಶನ.

ಕರ್ನಾಟಕದ ಬೈಕರ್, ತಮಿಳುನಾಡಿನ ಪೊಲೀಸ್, ಔಷಧ ಬಾಟಲಿಯೊಂದು ಸ್ಫೂರ್ತಿದಾಯಕ ಕತೆಯೊಂದನ್ನು ಕಟ್ಟಿಕೊಡುತ್ತವೆ. ಮೈಸೂರಿನಲ್ಲಿ ಪೊಲೀಸರ ವಿರುದ್ಧ ಗಂಭೀರ ಆರೋಪದ ಬೆನ್ನಲ್ಲೇ ಮಾನವೀಯತೆ ತುಂಬಿದ ಹೃದಯಸ್ಪರ್ಶಿ ಘಟನೆ ನಡೆದಿದೆ.

ಯುವಕ

ಇದನ್ನೂ ಓದಿ:ವಿಡಿಯೋ ಜೊತೆಜೊತೆಗೆ ಆಡಿಯೋ ಸರದಿ: ಯುವತಿಗಿದೆಯೇ ಪ್ರಭಾವಿ ನಾಯಕನ ಸಹಾಯ'ಹಸ್ತ'?

ಆತನ ಹೆಸರು ಅನ್ನಿ ಅರುಣ್, ಕರ್ನಾಟಕದ ಬೈಕರ್. ತೆಂಕಸಿ ಮೂಲಕ ಪಾಂಡಿಚೇರಿಗೆ ತೆರಳುತ್ತಿದ್ದಾಗ ​ತಮಿಳುನಾಡಿನ ಪೊಲೀಸ್‌ ಸಿಬ್ಬಂದಿ ಬೈಕ್​ ತಡೆದು ನಿಲ್ಲಿಸುತ್ತಾರೆ. ಅರುಣ್ ಏನೆಂದು ವಿಚಾರಿಸಿದಾಗ ಸರ್ಕಾರಿ ಬಸ್​ನಲ್ಲಿ ತೆರಳುತ್ತಿದ್ದ ವೃದ್ಧೆಯೋರ್ವಳು ಔಷಧಿಯ ಬಾಟೆಲ್‌ನ ರಸ್ತೆಯಲ್ಲಿ ಬೀಳಿಸಿಕೊಂಡಿದ್ದಾಗಿ, ಅದನ್ನು ಮಹಿಳೆಗೆ ವಾಪಸ್​ ನೀಡಬೇಕೆಂದು ಅರುಣ್​ ಬಳಿ ಮನವಿ ಮಾಡಿಕೊಳ್ಳುತ್ತಾರೆ. ಇದನ್ನು ಕೇಳಿದ ಅರುಣ್ ಸರ್ಕಾರಿ ಬಸ್​ ಹಿಂಬಾಲಿಸಿ, ಔಷಧಿ ಬಾಟಲನ್ನು ಬಸ್​ನಲ್ಲಿರುವ ವೃದ್ಧೆಗೆ ತಲುಪಿಸಿದರು.

ಬೈಕ್ ತಡೆದರೆ ಎಲ್ಲಿ ದಂಡ ಹಾಕ್ತಾರೋ ಎಂಬ ಭಯದಲ್ಲಿ ವಾಹನ ಸವಾರರು ಗಲಿಬಿಲಿಗೊಳ್ಳುತ್ತಾರೆ. ಆದ್ಯಾರೋ ಅಪರಿಚಿತ ಮಹಿಳೆ ಔಷಧಿ ಬಾಟಲಿ ಬೀಳಿಸಿಕೊಂಡಿರುವುದನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಸಿಬ್ಬಂದಿಯ ಮಾನವೀಯತೆ, ಬೈಕರ್​ನ ಕಾರ್ಯ ಮಾನವೀಯತೆಗೆ ಮತ್ತಷ್ಟು ಮೆರಗು ನೀಡುತ್ತವೆ. ಈ ವಿಡಿಯೋ ಬೈಕರ್​ನ ಮುಂಬದಿಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸಾಕಷ್ಟು ಜನಮನ್ನಣೆ ಗಳಿಸಿದೆ.

Last Updated : Mar 27, 2021, 10:18 AM IST

ABOUT THE AUTHOR

...view details