ನಾಗೌರ್: ರೈಲ್ವೇ ನಿಲ್ದಾಣದಲ್ಲಿ ಇಬ್ಬರು ವೃದ್ಧ ಭಿಕ್ಷುಕರನ್ನು ಪೊಲೀಸ್ ಪೇದೆಯೊಬ್ಬರು ಕೆಟ್ಟದಾಗಿ ಬೈದು ಥಳಿಸಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
ರಾಜಸ್ಥಾನದ ನಾಗೌರ್ ಜಿಲ್ಲೆಯ ಮಕ್ರಾನಾ ರೈಲು ನಿಲ್ದಾಣದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯನ್ನು ರೈಲ್ವೇಸ್‌ನ ಆರ್‌ಪಿಎಫ್‌ನ ಕಾನ್‌ಸ್ಟೇಬಲ್ ಎಂದು ಗುರುತಿಸಲಾಗಿದೆ.
ಈ ವಿಡಿಯೋ ಸುಮಾರು ಎರಡರಿಂದ ಮೂರು ದಿನಗಳ ಹಳೆಯದಾಗಿದ್ದು, ರೈಲ್ವೇ ನಿಲ್ದಾಣದಲ್ಲಿ ಸಹ ಪ್ರಯಾಣಿಕರು ಚಿತ್ರೀಕರಿಸಿದ್ದಾರೆ.
ಭಿಕ್ಷುಕರನ್ನು ನಿರ್ದಯವಾಗಿ ಥಳಿಸಿದ ಪೊಲೀಸ್ ವಿಡಿಯೋಗೆ ಪ್ರತಿಕ್ರಿಯಿಸಿದ ಜಿಆರ್‌ಪಿ ಔಟ್‌ಪೋಸ್ಟ್ ಇನ್‌ಚಾರ್ಜ್ ಲಾಲ್‌ಚಂದ್ ಪರೇವಾ, ಭಿಕ್ಷುಕರು ರೈಲ್ವೆ ನಿಲ್ದಾಣದ ಪ್ರಯಾಣಿಕರ ಆಹಾರದ ವಿಷಯದಲ್ಲಿ ತೊಂದರೆ ಉಂಟುಮಾಡುತ್ತಿದ್ದರು ಎಂದಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ