ಬೇಗುಸರಾಯ್ ( ಬಿಹಾರ): ಅಬಕಾರಿ ಪೊಲೀಸ್ ಅಧಿಕಾರಿ ಮತ್ತು ಈತನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಇಬ್ಬರೂ ಒಟ್ಟಿಗೆ ಸಿಕ್ಕಿ ಬಿದ್ದಿದ್ದು, ಅಲ್ಲಿಯೇ ಇಬ್ಬರಿಗೂ ಮದುವೆ ಮಾಡಿಸಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿ ಮತ್ತು ಮಹಿಳೆ ಇಬ್ಬರೂ ವಿವಾಹಿತರಾಗಿದ್ದು, ಬಹಳ ದಿನಗಳಿಂದ ಇಬ್ಬರು ನಡುವೆ ಸಂಬಂಧ ಇತ್ತು ಎನ್ನಲಾಗಿದೆ.
ಅಬಕಾರಿ ಇಲಾಖೆಯ ಎಎಸ್‌ಐ ಆಗಿರುವ ಸುಮಂತ್ ಕುಮಾರ್ ಶರ್ಮಾ ಅವರ ಕುಟುಂಬ ಗುವಾಹಟಿಯಲ್ಲಿ ವಾಸಿಸುತ್ತಿದೆ. ಇದರ ನಡುವೆ ಬೇಗುಸರಾಯ್‌ನ ಬನ್ಹರಾ ಗ್ರಾಮದ ಮಹಿಳೆಯನ್ನು ಸುಮಂತ್ ಬಲೆಗೆ ಬೀಳಿಸಿಕೊಂಡಿದ್ದರು. ಅಲ್ಲದೇ, ಸುಮಂತ್ ಮಹಿಳೆ ನಿರಂತರವಾಗಿ ಮನೆಗೆ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಮನೆಗೆ ಬಂದಾಗಲೂ ಸುಮಂತ್ ಮಹಿಳೆಯೊಂದಿಗೆ ಇದ್ದರು. ಈ ವಿಷಯ ತಿಳಿದ ಮಹಿಳೆಯ ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಇಬ್ಬರನ್ನೂ ಹಿಡಿದಿದ್ದಾರೆ.
ಆಗ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ. ಅಲ್ಲದೇ, ಮಹಿಳೆಯು ತನ್ನನ್ನು ಮದುವೆಯಾಗುವಂತೆ ಸುಮಂತ್ ಕುಮಾರ್ ಶರ್ಮಾ ಮುಂದೆ ಬೇಡಿಕೆ ಇಟ್ಟಿದ್ದಾಳೆ. ಇದರಿಂದ ದಿಕ್ಕು ತೋಚದೇ ಕೊನೆಗೂ ಮಹಿಳೆಯ ಹಣೆಗೆ ಎಎಸ್‌ಐ ಸುಮಂತ್ ಕುಮಾರ್ ಶರ್ಮಾ ಸಿಂಧೂರ ಹಚ್ಚುವ ಮೂಲಕ ಮದುವೆಯಾಗಿದ್ದಾರೆ. ಇದರ ದೃಶ್ಯಗಳು ಮೊಬೈಲ್ನಲ್ಲೂ ಸೆರೆ ಹಿಡಿದಿದ್ದು, ಸದ್ಯ ಎಎಸ್‌ಐ ಮದುವೆ ವಿಡಿಯೋ ವೈರಲ್ ಆಗಿದೆ.