ಕರ್ನಾಟಕ

karnataka

ETV Bharat / bharat

ಕಣ್ಣೂರಿನಲ್ಲಿ ಪ್ರಯಾಣಿಕನಿಗೆ ಅಮಾನವೀಯವಾಗಿ ಒದ್ದು ಎಎಸ್‌ಐ ದೌರ್ಜನ್ಯ - ಪ್ರಯಾಣಿಕನಿಗೆ ಒದ್ದ ಪೊಲೀಸರು

ಪೊಲೀಸ್ ಸಿಬ್ಬಂದಿ ಪ್ರಯಾಣಿಕನನ್ನು ಒದ್ದು ರೈಲಿನಿಂದ ಹೊರಹಾಕಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Video of policeman kicking  a train passenger put Kerala police in a bad light
Video of policeman kicking a train passenger put Kerala police in a bad light

By

Published : Jan 3, 2022, 3:06 PM IST

Updated : Jan 3, 2022, 4:03 PM IST

ಕಣ್ಣೂರು(ಕೇರಳ): ಎಎಸ್‌ಐ ಒಬ್ಬರು ರೈಲು ಪ್ರಯಾಣಿಕನನ್ನು ಕ್ರೂರವಾಗಿ ಒದೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪೊಲೀಸರು ಜನರೊಂದಿಗೆ ವರ್ತಿಸುತ್ತಿರುವ ರೀತಿಯನ್ನು ಸಾರ್ವಜನಿಕರು ಖಂಡಿಸಿದ್ದಾರೆ.

ರೈಲ್ವೇ ಪೊಲೀಸರೊಂದಿಗಿದ್ದ ಎಎಸ್‌ಐ ಪ್ರಮೋದ್, ಪ್ರಯಾಣಿಕನೊಬ್ಬನನ್ನು ಕೆಳಗೆ ಎಳೆದುಕೊಂಡು ಬಂದು ತಮ್ಮ ಬೂಟುಕಾಲಿಂದ ಪದೇ ಪದೇ ಒದೆಯುವುದು ದೃಶ್ಯದಲ್ಲಿದೆ. ಟಿಕೆಟ್‌ರಹಿತ ಪ್ರಯಾಣವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ವೈರಲ್ ವಿಡಿಯೋ

ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಕಣ್ಣೂರು ನಗರ ಪೊಲೀಸ್ ಕಮಿಷನರ್ ಆರ್.ಇಲಾಂಗೋ ಅವರು ವಿಶೇಷ ತಂಡವನ್ನು ನಿಯೋಜಿಸಿದ್ದಾರೆ. ರೈಲ್ವೇ ಪೊಲೀಸರು ಕೂಡಾ ತನಿಖೆ ಆರಂಭಿಸಿದ್ದಾರೆ.

ವಿವರ:

ಕಾಸರಗೋಡಿನಿಂದ ತಿರುವನಂತಪುರಕ್ಕೆ ಹೋಗುವ ಮಾವೇಲಿ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕಂಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ಜರುಗಿದೆ. ಎಎಸ್‌ಐ ಪ್ರಮೋದ್ ಮತ್ತು ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಈ ರೀತಿ ವರ್ತನೆ ತೋರಿದ್ದಾರೆ. ಪ್ರಯಾಣಿಕನಿಗೆ ಟಿಕೆಟ್ ತೋರಿಸಲು ಕೇಳಿದ್ದಾರೆ. ಆತ ತನ್ನ ಬಳಿ ಸ್ಲೀಪರ್ ಟಿಕೆಟ್ ಇಲ್ಲ. ಆದರೆ, ಸಾಮಾನ್ಯ ಟಿಕೆಟ್ ಮಾತ್ರ ಇದೆ ಎಂದು ಹೇಳಿದ್ದಾನೆ. ಇದರಿಂದ ಕುಪಿತಗೊಂಡ ಪೊಲೀಸ್​ ಆತನನ್ನು ಕಾಲಿನಿಂದ ಒದೆಯುತ್ತಾರೆ. ನಂತರ ವಡಕರ ನಿಲ್ದಾಣದಲ್ಲಿ ರೈಲು ಸ್ಟಾಪ್​ ಆದಾಗ ಪ್ರಯಾಣಿಕರನ್ನು ಕಂಪಾರ್ಟ್‌ಮೆಂಟ್‌ನಿಂದ ಹೊರ ದಬ್ಬಲಾಗಿದೆ.

ಇದನ್ನೂ ಓದಿ:ಮುಂಬೈನ ಘಾಟ್‌ಕೋಪರ್ ಪ್ರದೇಶದ ಬಟ್ಟೆ ಅಂಗಡಿ ಗೋಡೌನ್‌ನಲ್ಲಿ ಬೆಂಕಿ; ಅಗ್ನಿಶಾಮಕ ವಾಹನಗಳು ದೌಡು

ಈ ಎಲ್ಲಾ ಘಟನೆಯನ್ನು ಪ್ರಯಾಣಿಕರೋರ್ವರು ವಿಡಿಯೋ ಮಾಡುತ್ತಿದ್ದಾರೆ ಎಂದು ಅರಿವಾದಾಗ ಎಎಸ್‌ಐ ಅವರಿಂದಲೂ ಟಿಕೆಟ್ ಕೇಳಿದ್ದಾರೆ. ಪೊಲೀಸರಿಗೆ ಟಿಕೆಟ್ ತೋರಿಸಲು ನಿರಾಕರಿಸಿದ ಅವರು, ಟಿಟಿಇಗೆ ಮಾತ್ರ ಟಿಕೆಟ್ ತೋರಿಸುವುದಾಗಿ ಹೇಳಿದರು.

ಈ ಸಂಬಂಧ ಎಎಸ್‌ಐ ಪ್ರಮೋದ್ ಅವರನ್ನು ಕೇಳಿದಾಗ, ಟಿಕೆಟ್ ರಹಿತ ಪ್ರಯಾಣಿಕರನ್ನು ರೈಲಿನಿಂದ ಹೊರಬರಲು ಮಾತ್ರ ಕೇಳಿದ್ದೇನೆ ಅಷ್ಟೇ ಎಂದರು.

Last Updated : Jan 3, 2022, 4:03 PM IST

ABOUT THE AUTHOR

...view details