ಕರ್ನಾಟಕ

karnataka

ETV Bharat / bharat

ದೆವ್ವ ಭಯದಲ್ಲಿ ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್‌ಟೇಬಲ್‌: ಕನಸಲ್ಲಿ ಬರ್ತಿತ್ತಂತೆ ಹೆಣ್ಣಿನ ಆತ್ಮ

ದೆವ್ವದ ಕಾಟಕ್ಕೆ ಹೆದರಿ ಪೊಲೀಸ್​​ ಕಾನ್​​ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

Policeman dies by suicide
Policeman dies by suicide

By

Published : Nov 17, 2021, 10:11 PM IST

Updated : Nov 17, 2021, 10:19 PM IST

ಕಡಲೂರು(ತಮಿಳುನಾಡು): ದೆವ್ವಕ್ಕೆ ಹೆದರಿ ಪೊಲೀಸ್ ಕಾನ್​​ಸ್ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ. 33 ವರ್ಷದ ಪ್ರಭಾಕರನ್​ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಕಡಲೂರು ಸಶಸ್ತ್ರ ಪೊಲೀಸ್​ ಪಡೆಯಲ್ಲಿ ಕಾನ್​ಸ್ಟೇಬಲ್ (Police Constable in the Cuddalore Armed Forces)​​ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರಭಾಕರನ್​​ ಕಳೆದ ಕೆಲವು ವರ್ಷಗಳ ಹಿಂದೆ ವಿಷ್ಣುಪ್ರಿಯಾ ಎಂಬುವವರನ್ನು ವಿವಾಹವಾಗಿದ್ದರು. ಇವರಿಗೆ ಓರ್ವ ಮಗ, ಮಗಳಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಇವರು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಆತ್ಮಹತ್ಯೆಗೆ ಶರಣಾಗಿರುವ ಪೊಲೀಸ್ ಕಾನ್​​ಸ್ಟೇಬಲ್​​

ಪೊಲೀಸ್​​ ವಸತಿಗೃಹದಲ್ಲಿ ವಾಸ ಮಾಡ್ತಿದ್ದ ಇವರಿಗೆ ಕನಸಿನಲ್ಲಿ ಮಹಿಳೆಯೋರ್ವಳು ಬಂದು ಕತ್ತು ಹಿಸುಕುವ ಅನುಭವವಾಗುತ್ತಿತ್ತಂತೆ. ಇದರ ಬಗ್ಗೆ ಕುಟುಂಬಸ್ಥರು ಹಾಗೂ ಸ್ನೇಹಿತರ ಮುಂದೆ ಹೇಳಿಕೊಂಡಿದ್ದರಂತೆ. ಕಳೆದ 15 ದಿನಗಳಿಂದ ರಜೆ ಪಡೆದುಕೊಂಡು ಮನೆಯಲ್ಲಿದ್ದರು. ಇದರ ಮಧ್ಯೆ ನವೆಂಬರ್​ 16ರಂದು ಪತ್ನಿ ವಿಷ್ಣುಪ್ರಿಯಾ ಹಾಗೂ ಮಕ್ಕಳು ಸಂಬಂಧಿಕರ ಮದುವೆಗೆ ಮೇಲ್ಪಟ್ಟಾಂಬಕ್ಕಂಗೆ ತೆರಳಿದ್ದಾರೆ. ಅಲ್ಲಿಂದ ವಾಪಸ್​ ಬರುವಷ್ಟರಲ್ಲಿ ಪತಿ ನೇಣಿಗೆ ಶರಣಾಗಿದ್ದಾರೆ.

ಇದನ್ನೂ ಓದಿರಿ:ಪಾಕ್‌ನಲ್ಲಿ 2025ರ ಐಸಿಸಿ ಚಾಂಪಿಯನ್​​ ಟ್ರೋಫಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದೇನು?

ದೆವ್ವದ ಕಾಟ ಶುರುವಾಗಿದ್ದರಿಂದ ಪ್ರಭಾಕರನ್​​ ಮಾಟಗಾತಿಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಹೀಗಾಗಿ 15 ದಿನಗಳ ಕಾಲ ಪ್ರಾರ್ಥನಾ ಕೊಠಡಿಯಲ್ಲಿ ಉಳಿದುಕೊಂಡಿದ್ದರಂತೆ. ಇದರ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತ ವಾಸವಾಗಿದ್ದ ಕ್ವಾರ್ಟರ್ಸ್​​ನಲ್ಲಿ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪೊಲೀಸರು ಕೂಡ ಈತನ ಆತ್ಮಹತ್ಯೆಗೆ ಕೆಲಸದ ಹೊರೆ ಕಾರಣವಲ್ಲ, ಬದಲಿಗೆ ದೆವ್ವದ ಭಯವೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

Last Updated : Nov 17, 2021, 10:19 PM IST

ABOUT THE AUTHOR

...view details