ಕರ್ನಾಟಕ

karnataka

ETV Bharat / bharat

ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ಯತ್ನ.. ಪೊಲೀಸರ ಮೇಲೆ ಹಲ್ಲೆ ನಡೆಸಿದ ವ್ಯಾಪಾರಸ್ಥರು - ಬಿಹಾರದ ರೋಹ್ಟಾಸ್​

ಮಾರುಕಟ್ಟೆಯನ್ನ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲು ಮುಂದಾದ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

vegetable market
vegetable market

By

Published : May 8, 2021, 4:10 PM IST

ರೋಹ್ಟಾಸ್​​(ಬಿಹಾರ): ದೇಶದಲ್ಲಿ ಕೋವಿಡ್ ಮಹಾಮಾರಿ ಹೆಚ್ಚಾಗಿರುವ ಸಂದರ್ಭದಲ್ಲಿ ಕೆಲವೊಂದು ರಾಜ್ಯಗಳಲ್ಲಿ ಕಠಿಣ ಲಾಕ್​ಡೌನ್ ವಿಧಿಸಲಾಗಿದ್ದು, ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ ವ್ಯಾಪಾರಸ್ಥರು

ಬಿಹಾರದಲ್ಲೂ ಕೊರೊನಾ ಹಾವಳಿ ಹೆಚ್ಚಾಗಿದ್ದು, ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆ ಮಾಡಲು ಈಗಾಗಲೇ ಸೂಚಿಸಲಾಗಿದೆ. ಇದರ ಮಧ್ಯೆ ತರಕಾರಿ ಮಾರುಕಟ್ಟೆಯನ್ನ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲು ಮುಂದಾದ ಪೊಲೀಸರ ಮೇಲೆ ವ್ಯಾಪಾರಸ್ಥರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಅನೇಕ ಪೊಲೀಸರು ಗಾಯಗೊಂಡಿದ್ದಾರೆ. ಈ ವೇಳೆ ಜನರನ್ನ ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ ವ್ಯಾಪಾರಸ್ಥರು

ಇದನ್ನೂ ಓದಿ: ಕುಟುಂಬ ಸಾಕುವ ಜವಾಬ್ದಾರಿ: 10ನೇ ವರ್ಷಕ್ಕೆ ಬೀದಿಗಿಳಿದು ಸಾಕ್ಸ್​ ಮಾರುವ ಬಾಲಕನಿಗೆ ಸಿಕ್ತು ಸಿಎಂ ಸಹಾಯ!

ಇಷ್ಟು ದಿನ ಚಿಕ್ಕ ಸ್ಥಳದಲ್ಲಿ ಮಾರುಕಟ್ಟೆ ನಡೆಸಲಾಗುತ್ತಿತ್ತು. ಇದೀಗ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲು ಪೊಲೀಸರ ತಂಡ ಆಗಮಿಸಿತು. ಈ ವೇಳೆ ಕೋಪಗೊಂಡ ವ್ಯಾಪಾರಸ್ಥರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲು ಸಹ ಎಸೆದಿರುವ ಘಟನೆ ನಡೆದಿದ್ದು, ಕೆಲವರು ಗಾಯಗೊಂಡಿದ್ದಾರೆ. ಜನಸಮೂಹ ಕೋಪಗೊಳ್ಳುತ್ತಿರುವುದನ್ನ ನೋಡಿರುವ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಓಡಿ ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ಬಂಧನ ಮಾಡಲಾಗಿದೆ.

ABOUT THE AUTHOR

...view details