ನವದೆಹಲಿ :ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಕೆಲ ದಿನಗಳ ಹಿಂದೆ ನಡೆದ ವಿದ್ಯಾರ್ಥಿ ಕೊಲೆಯನ್ನು ಪೊಲೀಸರು ಬೇಧಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕನನ್ನು ಆತನ ಇಬ್ಬರು ಸಹಪಾಠಿಗಳು ಥಳಿಸಿ ಕೊಂದಿದ್ದಾರೆ. ಗುರುವಾರ ರಾತ್ರಿ ಆಗ್ನೇಯ ದೆಹಲಿಯ ಬದರ್‌ಪುರ ಬಳಿಯ ಕಾಲುವೆಯಲ್ಲಿ ಶಾಲಾ ಸಮವಸ್ತ್ರದಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ಶಾಲಾ ಬ್ಯಾಗ್ ಕೂಡ ಕಾಲುವೆಯ ಪಕ್ಕದಲ್ಲಿ ಬಿದ್ದಿತ್ತು. ಮೃತ ಬಾಲಕ ಇಲ್ಲಿನ ಸಮೀಪದ ಮೊಲದ್‌ಬಂದ್ ಗ್ರಾಮದ ಬಿಲಾಸ್‌ಪುರ ಕ್ಯಾಂಪ್‌ನ ಸೌರಭ್ (12) ಎಂದು ಗುರುತಿಸಲಾಗಿತ್ತು. ಬಳಿಕ ತನಿಖೆ ಕೈಗೊಂಡ ಪೊಲೀಸರಿಗೆ ಅಚ್ಚರಿ ಸಂಗತಿಯೊಂದು ಬೆಳಕಿಗೆ ಬಂತು.
ನಿಜವಾದ ತಾಯಿಯ ಆತಂಕ:ಗುರುವಾರದಂದು ನನ್ನ ಮಗ ಶಾಲೆಗೆ ಹೋಗಿದ್ದು, ಮನೆಗೆ ಬಂದಿಲ್ಲ. ಹುಡುಕಾಟ ನಡೆಸಿದ ಬಳಿಕ ಪೊಲೀಸರಿಗೆ ನಾಪತ್ತೆ ಆಗಿರುವ ಬಗ್ಗೆ ದೂರು ನೀಡಿದ್ದೇವು. ನಿನ್ನೆ ನಾನು ನನ್ನ ಮಗನೊಂದಿಗೆ ಶಾಲೆಗೆ ಹೋಗಿದ್ದೆ. ನನ್ನ ಮಗ ಆ ವರ್ಗ ವಿಭಾಗವನ್ನು ಬದಲಾಯಿಸಲು ಬಯಸಿದ್ದನು. ಅವರ ವಿಭಾಗದಲ್ಲಿ ದೊಡ್ಡ ಹುಡುಗರಿದ್ದಾರೆ. ನಾನು ಅವರೊಂದಿಗೆ ಕಲಿಯಲು ಆಗುವುದಿಲ್ಲ. ಶಿಕ್ಷಕರೊಂದಿಗೆ ಮಾತನಾಡಿದರೂ ಅವರು ನನ್ನ ವಿಭಾಗವನ್ನು ಬದಲಾಯಿಸಲಿಲ್ಲ ಎಂದು ನನ್ನ ಮಗ ನನಗೆ ಹೇಳಿದ್ದ ಅಂತಾ ವಿದ್ಯಾರ್ಥಿಯ ತಾಯಿ ದರ್ಪಣ್ ತಿಳಿಸಿದ್ದಾರೆ.
ನಂತರ ನಾನು ಮಗನನ್ನು ಶಾಲೆಗೆ ಬಿಟ್ಟು ನನ್ನ ಕರ್ತವ್ಯಕ್ಕೆ ಹೋಗಿದ್ದೆ. ಸಂಜೆ ಏಳು ಗಂಟೆಯಾದರೂ ನನ್ನ ಮಗ ಮನೆಗೆ ಬಂದಿರಲಿಲ್ಲ ಎಂದು ಕರೆ ಬಂತು. ಗಾಬರಿಗೊಂಡು ನಾನು ಶಾಲೆಗೆ ತೆರಳಿ ಹುಡುಕಲು ಪ್ರಾರಂಭಿಸಿದೆ. ಆದ್ರೆ ಅವನ ಸುಳಿವು ಎಲ್ಲೂ ಸಿಗಲಿಲ್ಲ. ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದೇವು ಎಂದು ತಾಯಿ ಹೇಳಿದರು.