ಮುಂಬೈ(ಮಹಾರಾಷ್ಟ್ರ):ಇಲ್ಲಿನ ಘಾಟ್ಕೋಪರ್ ಪೊಲೀಸ್ ಠಾಣಾ (Ghatkopar Police station) ವ್ಯಾಪ್ತಿಯ ನಾಲೆಯಲ್ಲಿ ನವಜಾತ ಶಿಶು ಪತ್ತೆಯಾಗಿದ್ದು ಪೊಲೀಸರು ರಕ್ಷಿಸಿದ್ದಾರೆ. ಮಗು ಆರೋಗ್ಯವಾಗಿದೆ. ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವರ:
ಮುಂಬೈನ ಘಾಟ್ಕೋಪರ್ನ ರಮಾಬಾಯಿ ನಗರ ಪ್ರದೇಶದ ನಾಲೆಯಲ್ಲಿ ಅಪರಿಚಿತ ವ್ಯಕ್ತಿ ಈ ಶಿಶುವನ್ನು ನಾಲೆಗೆಸೆದು ಪರಾರಿಯಾಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಮಗುವನ್ನು ನಾಲೆಯಿಂದ ಹೊರತೆಗೆದು ರಾಜವಾಡಿ ಆಸ್ಪತ್ರೆಗೆ ಸೇರಿಸಿದರು. ಆರೋಪಿಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಟಿವಿ ಚರ್ಚೆಗಳು ಹೆಚ್ಚು ಮಾಲಿನ್ಯ ಸೃಷ್ಟಿಸುತ್ತಿವೆ: ಸುಪ್ರೀಂಕೋರ್ಟ್
ರಮಾಬಾಯಿ ನಗರದ ಸುರೇಶ್ ರಣಪಿಸೆ ಅವರ ಮನೆಯ ಹತ್ತಿರದ ನಾಲೆಯಲ್ಲಿ ಮಗು ಅಳುವ ಶಬ್ದ ಕೇಳುತ್ತಿತ್ತು. ಈ ವೇಳೆ ಸ್ಥಳೀಯರು ಅಲ್ಲಿಗೆ ಹೋಗಿ ನೋಡಿದಾಗ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಎಸೆದಿರುವುದು ಕಂಡುಬಂದಿದೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಇನ್ಸ್ಪೆಕ್ಟರ್ ಕಿಶೋರ್ ಶಿಂಧೆ ನೇತೃತ್ವದ ತಂಡ ಭೇಟಿ ನೀಡಿ, ಮಗುವನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದರು. ಪಂತನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.