ಮನೇಂದ್ರಗಢ(ಛತ್ತೀಸ್‌ಗಢ):ಈಜಲು ಹೋಗಿ ನದಿ ಪ್ರವಾಹಕ್ಕೆ ಸಿಲುಕಿದ ನಾಲ್ವರು ಮಕ್ಕಳನ್ನು ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಮನೇಂದ್ರಗಢ ಪ್ರದೇಶದ ನದಿಯಿಂದ ಪೊಲೀಸರು ರಕ್ಷಿಸಿದ್ದಾರೆ.
Watch: ಈಜಲು ಹೋದಾಗ ಏಕಾಏಕಿ ನದಿ ಪ್ರವಾಹ: ನಾಲ್ವರು ಮಕ್ಕಳನ್ನು ರಕ್ಷಿಸಿದ ಪೊಲೀಸರು - Police rescued four children
ಈಜಲು ಹೋದ ವೇಳೆ ಏಕಾಏಕಿ ನದಿ ನೀರು ಹೆಚ್ಚಾಗಿ ಅಪಾಯಕ್ಕೆ ಸಿಲುಕಿದ್ದ ನಾಲ್ವರು ಮಕ್ಕಳನ್ನು ಪೊಲೀಸರು ರಕ್ಷಿಸಿದ ಘಟನೆ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ.
ನಾಲ್ವರು ಮಕ್ಕಳ ರಕ್ಷಣೆ
ಮಕ್ಕಳು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ಮಟ್ಟ ಏಕಾಏಕಿ ಏರಿಕೆಯಾಯ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಗ್ಗ ಕಟ್ಟಿ 2 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಮಕ್ಕಳನ್ನು ಸುರಕ್ಷಿತವಾಗಿ ದಡಸೇರಿಸಿದ್ದಾರೆ. ಮಕ್ಕಳನ್ನು ನದಿಯಿಂದ ರಕ್ಷಿಸಿದ ಪೊಲೀಸರ ಕಾರ್ಯಾಚರಣೆಗೆ ಸ್ಥಳೀಯರು ಕೂಡ ಸಹಕರಿಸಿದರು.
ಇದನ್ನೂ ಓದಿ:ಮಗಳನ್ನು ನದಿಗೆಸೆದ ಪಾಪಿ ತಂದೆ: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ತೇಲಿ ಬಂತು ಮೃತದೇಹ!