ತಿರುವನಂತಪುರಂ(ಕೇರಳ): ಸಾಲವಾಗಿ ನೀಡಿದ ಹಣವನ್ನು ವಾಪಸ್ ಕೊಡದ ಕುಟುಂಬದ ಬಾಲಕನನ್ನು ವ್ಯಕ್ತಿಯೊಬ್ಬ ಅಪಹರಿಸಿದ್ದಾನೆ. ಬಳಿಕ ಹಣಕ್ಕಾಗಿ ಬೇಡಿಕೆ ಇಡಲು ರೂಪಿಸಿದ್ದ ಸಂಚನ್ನು ಪೊಲೀಸರು ಭೇದಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಜೊತೆಗೆ ಓರ್ವ ಅಪಹರಣಕಾರನನ್ನು ಬಂಧಿಸಿದ್ದು, ವಾಹನವನ್ನು ಜಪ್ತಿ ಮಾಡಲಾಗಿದೆ.
ಈ ಘಟನೆ ಕೇರಳದ ಕೊಟ್ಟಾಯಂನಲ್ಲಿ ಇಂದು ನಡೆದಿದೆ. ಸಂಬಂಧಿಯೊಬ್ಬ ಕುಟುಂಬವೊಂದಕ್ಕೆ 10 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು. ಇದನ್ನು ವಾಪಸ್ ಕೊಡದ ಹಿನ್ನೆಲೆಯಲ್ಲಿ ತಂಡವೊಂದರ ಸಹಾಯದಿಂದ ಮನೆಗೆ ಬಂದ ಆತ ಬಾಲಕನನ್ನು ಅಪಹರಿಸಿದ್ದಾರೆ. ಈ ವೇಳೆ ಸಹಾಯಕ್ಕೆ ಬಂದ ನೆರೆಹೊರೆಯವರು ಮತ್ತು ಬಾಲಕನ ಸಹೋದರಿಯನ್ನು ಥಳಿಸಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
10 ಲಕ್ಷ ರೂಪಾಯಿ ಕಾರಣ:ಅಪಹರಣಗೊಂಡ ಬಾಲಕನ ಕುಟುಂಬಸ್ಥರು 10 ಲಕ್ಷ ರೂಪಾಯಿ ಹಣವನ್ನು ಅಪಹರಣಕಾರ ವ್ಯಕ್ತಿಯಿಂದ ಸಾಲವಾಗಿ ಪಡೆದಿದ್ದರು. ಬಾಲಕನ ಮನೆಯವರು ಹಣವನ್ನು ವಾಪಸ್ ನೀಡದ ಕಾರಣ 1 ಲಕ್ಷ ರೂಪಾಯಿ ನೀಡಿ ಬಾಲಕನನ್ನು ಅಪಹರಿಸಲು ಗ್ಯಾಂಗ್ ಅನ್ನು ಕಳಿಸಿದ್ದರು. ಬಾಲಕನ ಒತ್ತೆಯಿಟ್ಟುಕೊಂಡು ಹಣ ಪಡೆಯುವ ಸಂಚು ರೂಪಿಸಿದ್ದರು.