ಕರ್ನಾಟಕ

karnataka

ETV Bharat / bharat

ಕೊಯಮತ್ತೂರು ಕಾರ್​ ಸಿಲಿಂಡರ್ ಸ್ಫೋಟ  ಪ್ರಕರಣ: ಚೆನ್ನೈನ ನಾಲ್ಕು ಕಡೆ ಪೊಲೀಸರಿಂದ ದಿಢೀರ್​ ದಾಳಿ - ನಿಷೇಧಿತ ಸಂಘಟನೆಗೆ ನಕಲಿ ಪಾಸ್​ಪೋರ್ಟ್

ಕೊಯಮತ್ತೂರಿನಲ್ಲಿ ನಡೆದ ಕಾರ್​ ಸ್ಪೋಟ ಪ್ರಕರಣ ಸಂಬಂಧ ಎನ್​ಐಎ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ವಿಶೇಷವಾಗಿ ಎನ್​ಐಎ ಚೆನ್ನೈ ಮತ್ತು ಕೊಯಮತ್ತೂರಿನ 43 ಕಡೆ ನವೆಂಬರ್​ 10ರಂದು ದಾಳಿ ನಡೆಸಿದೆ. ಈ ದಾಳಿ ವೇಳೆ ಪ್ರಮುಖ ದಾಖಲೆಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಕೊಯಮತ್ತೂರು ಕಾರ್​ ಸಿಲಿಂಡರ್ ಸ್ಪೋಟ​ ಪ್ರಕರಣ: ಚೆನ್ನೈನ ನಾಲ್ಕು ಕಡೆ ಪೊಲೀಸರಿಂದ ದಿಢೀರ್​ ದಾಳಿ
police Raids in Chennai related to Coimbatore car cylinder blast case

By

Published : Nov 15, 2022, 3:42 PM IST

ಕೊಯಮತ್ತೂರು: ಕೊಯಮತ್ತೂರಿನಲ್ಲಿ ನಡೆದ ಕಾರ್​ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚೆನ್ನೈನ ನಾಲ್ಕು ಕಡೆ ದಿಢೀರ್​ ದಾಳಿ ನಡೆಸಿದ್ದಾರೆ. ನಿಷೇಧಿತ ಸಂಘಟನೆ ಜೊತೆಗಿನ ನಂಟಿನ ಹಿನ್ನೆಲೆ ಈ ದಾಳಿ ನಡೆಸಲಾಗಿದೆ.

ಕೊಯಮತ್ತೂರಿನ ಕಾರ್​ ಸ್ಫೋಟ ಪ್ರಕರಣ ಸಂಬಂಧ ಎನ್​ಐಎ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ನವೆಂಬರ್​ 10ರಂದು ವಿಶೇಷವಾಗಿ ಎನ್​ಐಎ, ಚೆನ್ನೈ ಮತ್ತು ಕೊಯಮತ್ತೂರಿನ 43 ಕಡೆ ದಾಳಿ ನಡೆಸಿದೆ. ಈ ದಾಳಿ ವೇಳೆ ಪ್ರಮುಖ ದಾಖಲೆಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಈ ನಡುವೆ ನಿಷೇಧಿತ ಸಂಘಟನೆಗೆ ನಕಲಿ ಪಾಸ್​ಪೋರ್ಟ್​​ ಮತ್ತು ಸಿಮ್​ ಕಾರ್ಡ್​​ ನೀಡಿದವರ ಸಂಬಂಧ ಕೇಂದ್ರ ಗೃಹ ಸಚಿವಾಲಯ ಪಟ್ಟಿ ತಯಾರಿಸಿದೆ. ಈ ಪಟ್ಟಿಯಲ್ಲಿ ಚೆನ್ನೈನಲ್ಲಿ ನಿಷೇಧಿತ ಹೋರಾಟದ ಭಾಗವಾಗಿದ್ದ 18 ಮಂದಿ ಹೆಸರು ಕೂಡ ಇದೆ.

ಚನ್ನೈನ ನಾಲ್ಕು ಕಡೆ ದಾಳಿ ಬಳಿಕ ಕೊಡುಂಕೈಯುರ್​ನ ವೆಲ್ಲುವರ್​ ರಸ್ತೆಯಲ್ಲಿನ ಮೊಹಮ್ಮದ್​ ತಪ್ರಾಸ್​ ಮನೆಯಲ್ಲಿ ಶೋಧ ನಡೆಸಲಾಗಿದೆ. ನಿಷೇಧಿತ ಸಂಘಟನೆಗೆ ಹಣ ವರ್ಗಾವಣೆ ನಡೆಸಿದ ಆರೋಪದ ಮೇಲೆ ಮೊಹ್ಮದ್​ ಮೇಲೆ ಪ್ರಕರಣ ಇದೆ.

ಸಿರಿಯಾ ಮತ್ತು ಇರಾಕ್​​ ಭಯೋತ್ಪಾದಕರಿಗೆ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ತೊಫಿಕ್​ ಅಹ್ಮದ್​ ಎಂಬಾತನನ್ನು ಯುಪಿಎ ಕಾಯ್ದೆ ಅಡಿ ಬಂಧಿಸಲಾಗಿದೆ. ನಿಷೇಧಿತ ಸಂಘಟನೆಗೆ ಸಿಮ್​ ಕಾರ್ಡ್​ ಮಾರಾಟ ಮಾಡಿದ ಪ್ರಕರಣ ಹರೂನ್​ ರಶೀದ್​ ಮೇಲೆ ಪ್ರಕರಣ ಬಾಕಿ ಇದೆ.

ಮೂರು ವ್ಯಕ್ತಿಗಳ ಬಂಧನದ ಬಳಿಕ ಅಂಗಪ್ಪನ್​ ನಯಕ್ಕರ್​ ಸ್ಟ್ರೀಟ್​ ನಿವಾಸಿ ಮೊಹ್ಮದ್​ ಮುಸ್ತಾಫನನ್ನು ಬಂಧಿಸಲಾಗಿದೆ. ಈತ ನಿಷೇಧಿತ ಸಂಘಟನೆಗೆ ನಕಲಿ ಪಾಸ್​ಪೋರ್ಟ್​ ಮಾಡಿಕೊಡುತ್ತಿದ್ದ ಎನ್ನಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಎನ್​ಐಎ ನಡೆಸುತ್ತಿದೆ.

ಇದನ್ನು ಓದಿ:ಕೊಲೆಮಾಡಿ ತಿಂಗಳವರೆಗೂ ಶ್ರದ್ಧಾಳ ಇನ್​ಸ್ಟಾ ಅಕೌಂಟ್ ಚಾಲನೆಯಲ್ಲಿಟ್ಟಿದ್ದ ಅಫ್ತಾಬ್!

ABOUT THE AUTHOR

...view details