ಹೈದರಾಬಾದ್:ಇಲ್ಲಿನರಂಗಾರೆಡ್ಡಿ ಜಿಲ್ಲೆಯ ಹಯಾತ್ ನಗರ ಪಸುಮಾಮೂಲೆಯಲ್ಲಿ ಯುವಕನ ಹುಟ್ಟುಹಬ್ಬ ಆಚರಣೆಯಲ್ಲಿ ಗಾಂಜಾ ಬಳಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ವರು ಹುಡುಗಿಯರು ಸೇರಿದಂತೆ 29 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರೆಲ್ಲರೂ ಸಿಬಿಐಟಿ ಮತ್ತು ಎಂಜಿಐಟಿ ಕಾಲೇಜುಗಳ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಬಂಧಿತರಿಂದ 11 ಕಾರು, ಒಂದು ಬೈಕ್ ಮತ್ತು 28 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಗಾಂಜಾ ಜೊತೆ ಯುವಕರ ಬರ್ತ್ಡೇ ಪಾರ್ಟಿ; ಪೊಲೀಸರಿಂದ ದಾಳಿ - etv bharat kannada
ಯುವಕನ ಹುಟ್ಟುಹಬ್ಬ ಆಚರಣೆಯಲ್ಲಿ ಗಾಂಜಾ ಬಳಸಲಾಗುತ್ತಿದೆ ಎಂಬ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದರು.
ಗಾಂಜಾ ಬಳಸಿ ಯುವಕರ ಬರ್ತ್ಡೇ ಪಾರ್ಟಿ; ಪೊಲೀಸರಿಂದ ದಾಳಿ
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ವಿದ್ಯಾರ್ಥಿಗಳ ಪೋಷಕರಿಗೆ ಕೌನ್ಸೆಲಿಂಗ್ ಮಾಡಿದ್ದು ಬುಧವಾರ ಮಕ್ಕಳೊಂದಿಗೆ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಬಳಿಕ ವಶದಲ್ಲಿದ್ದವರನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ಬೆಂಗಳೂರು ಡ್ರಗ್ಸ್ ಬಲೆಯಲ್ಲಿ ಸಿಕ್ಕಿ ಟೆಕ್ಕಿಗಳು, ವಿದ್ಯಾರ್ಥಿಗಳು ವಿಲವಿಲ.. ಎರಡು ತಿಂಗಳಲ್ಲಿ 27 ಆರೋಪಿಗಳ ಬಂಧನ