ಲತೇಹಾರ್(ಜಾರ್ಖಂಡ್) : ನಕ್ಸಲರು ಹುದುಗಿಸಿಟ್ಟಿದ್ದ ಸುಮಾರು 25 ಬಾಂಬ್‌ಗಳನ್ನು ಜಾರ್ಖಂಡ್‌ನ ಲತೇಹಾರ್ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಲತೇಹಾರ್ ಎಸ್ಪಿ ಅಂಜನಿ ಅಂಜನ್ ನಿರ್ದೇಶನದಲ್ಲಿ ಬಾಂಬ್‌ಗಳನ್ನು ಪತ್ತೆ ಹಚ್ಚಿದ್ದು, ಪೊಲೀಸರ ವಿರುದ್ಧ ನಕ್ಸಲರು ರೂಪಿಸಿದ್ದ ಅತಿ ದೊಡ್ಡ ಸಂಚನ್ನು ವಿಫಲಗೊಳಿಸಿದ್ದಾರೆ.
ಲತೇಹರ್ ಜಿಲ್ಲೆಯ ಮಾಣಿಕಾ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ವೈಯಾ ಅರಣ್ಯದಲ್ಲಿ ಬಾಂಬ್‌ಗಳನ್ನು ಇರಿಸಲಾಗಿತ್ತು. ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದ ಮೇರೆಗೆ ಕಾಡಿನೊಳಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಬಾಂಬ್‌ಗಳನ್ನು ಹೊರತೆಗೆದಿದ್ದಾರೆ.