ಕರ್ನಾಟಕ

karnataka

ETV Bharat / bharat

ಪೊಲೀಸ್ ಜೀಪ್​ನ ಮೇಲೆ ಉರುಳಿದ ಟ್ರಕ್​: ಮೂವರು ಪೊಲೀಸರ ದುರ್ಮರಣ, ಇಬ್ಬರಿಗೆ ಗಾಯ - ಪಾಟ್ನಾ ಬಳಿ ಅಪಘಾತದಲ್ಲಿ ಮೂವರು ಪೊಲೀಸರ ಸಾವು

ಬಿಹಾರದ ಪಾಟ್ನಾದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಮೂವರು ಪೊಲೀಸರು ಮೃತಪಟ್ಟಿರುವ ಘಟನೆ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

POLICE PERSONAL DIED IN ROAD ACCIDENT IN PATNA
ಭೀಕರ ರಸ್ತೆ ಅಪಘಾತ: ಮೂವರು ಪೊಲೀಸರ ದುರ್ಮರಣ

By

Published : Jan 4, 2022, 8:49 AM IST

Updated : Jan 4, 2022, 9:40 AM IST

ಪಾಟ್ನಾ(ಬಿಹಾರ) :ಭೀಕರ ಅಪಘಾತವೊಂದರಲ್ಲಿ ಮೂವರು ಪೊಲೀಸರು ಸಾವನ್ನಪ್ಪಿರುವ ಘಟನೆ ಬಿಹಾರ ರಾಜಧಾನಿಯಾದ ಪಾಟ್ನಾ ಬಳಿಯ ದಾನಾಪುರ ಎಂಬಲ್ಲಿ ನಡೆದಿದೆ. ಟ್ರಕ್​ ಮತ್ತು ಪೊಲೀಸ್ ಜೀಪ್​ನ ನಡುವೆ ಈ ಅಪಘಾತ ಸಂಭವಿಸಿದೆ.

ಮೃತಪಟ್ಟ ಪೊಲೀಸರು ಗರ್ದನಿಭಾಗ್ ಪೊಲೀಸ್ ಠಾಣೆಗೆ ಸೇರಿದ ಪೊಲೀಸರು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದು, ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ಅಪಘಾತದ ನಡೆದ ಸ್ಥಳ

ವೇಗವಾಗಿ ಬಂದ ಟ್ರಕ್​ ನಿಯಂತ್ರಣ ತಪ್ಪಿ, ಪೊಲೀಸ್ ಜೀಪ್​ನ ಮೇಲೆ ಉರುಳಿ ಬಿದ್ದು ಘಟನೆ ಸಂಭವಿಸಿದೆ. ಇಬ್ಬರು ಪೊಲೀಸರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಟ್ರೇನಿ ಡಿಎಸ್​ಪಿ ಪ್ರಾಂಜಲ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬುಲ್ಲಿ ಬಾಯ್ ಆ್ಯಪ್​ ಕೇಸ್​: ಬೆಂಗಳೂರು ಮೂಲದ ವಿದ್ಯಾರ್ಥಿ ವಶಕ್ಕೆ ಪಡೆದ ಮುಂಬೈ ಪೊಲೀಸರು

Last Updated : Jan 4, 2022, 9:40 AM IST

ABOUT THE AUTHOR

...view details