ಮುಂಬೈ(ಮಹಾರಾಷ್ಟ್ರ): ಅಂಬಾನಿ ಮನೆ ಬಳಿ ಪತ್ತೆಯಾದ ಸ್ಫೋಟಕ ತುಂಬಿದ್ದ ಕಾರಿನ ಮಾಲೀಕ ಮನ್ಸುಖ್ ಹಿರೆನ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ಫೆಬ್ರವರಿ 25ರಂದು ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಯತ್ತಿರುವಾಗಲೇ ಕಾರಿನ ಮಾಲೀಕ ಮನ್ಸುಖ್ ಹಿರೆನ್ ಥಾಣೆ ಬಳಿ ಶವವಾಗಿ ಪತ್ತೆಯಾಗಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಇದಕ್ಕೂ ಒಂದು ವಾರ ಮೊದಲು ಹಿರೆನ್ ತನ್ನ ಕಾರು ಕಳುವಾಗಿರುವ ಬಗ್ಗೆ ಹೇಳಿದ್ದರು.
ಮುಂಬೈ ಕ್ರೈಂ ಬ್ರ್ಯಾಂಚ್ ಆಫೀಸರ್ ಸುನಿಲ್ ಮಾನೆ ಎನ್ಐಎ ವಶಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ವಶಕ್ಕೆ ಪಡೆದು ಎನ್ಐಎ ಹೆಚ್ಚಿನ ವಿಚಾರಣೆ ನಡೆಸುತ್ತಿದೆ. ಇದೀಗ ಐದನೇ ಆರೋಪಿಯಾಗಿ ಮುಂಬೈ ಕ್ರೈಂ ಬ್ರ್ಯಾಂಚ್ ಆಫೀಸರ್ ಸುನಿಲ್ ಮಾನೆಯನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಆಸ್ಪತ್ರೆ ಅಗ್ನಿ ದುರಂತದಲ್ಲಿ 13 ಮಂದಿ ಬಲಿ: ಇದೇನು ರಾಷ್ಟ್ರಮಟ್ಟದ ಸುದ್ದಿಯಲ್ಲ ಎಂದ 'ಮಹಾ' ಆರೋಗ್ಯ ಸಚಿವ!
ಮನ್ಸುಖ್ ಹಿರೆನ್ ಹತ್ಯೆಯಲ್ಲಿ ಸುನಿಲ್ ಮಾನೆ ಭಾಗಿಯಾಗಿದ್ದಾನೆ. ಈ ಪ್ರಕರಣದ ಆರೋಪದಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಸಹಾಯ ಮಾಡಿದ್ದಾನೆ ಎಂದು ಎನ್ಐಎ ಮೂಲಗಳು ತಿಳಿಸಿವೆ.