ನವದೆಹಲಿ:ರೋಹಿಣಿ ಜಿಲ್ಲೆಯ ಕೋರ್ಟ್ ಆವರಣದಲ್ಲಿ ಕಳೆದ ಶುಕ್ರವಾರ ಹತ್ಯೆಗೀಡಾದ ತಮ್ಮ ಗ್ಯಾಂಗ್ ಲೀಡರ್ ಜಿತೇಂದರ್ ಮನ್ ಅಲಿಯಾಸ್ ಗೋಗಿ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಟಿಲ್ಲು ತಾಜ್ಪುಪ್ರಿಯಾ ಅವರ ಕೊಲೆಗೆ ಸಂಚು ರೂಪಿಸಿದ್ದ 'ಗೋಗಿ ಗ್ಯಾಂಗ್'ನ ನಾಲ್ವರನ್ನು ದೆಹಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
Delh Shootout Case: 'ಟಿಲ್ಲು' ಹತ್ಯೆಗೆ ಸಂಚು ರೂಪಿಸಿದ್ದ 'ಗೋಗಿ ಗ್ಯಾಂಗ್'ನ ನಾಲ್ವರು ಅಂದರ್ - Delh Shootout Case,
ರೋಹಿಣಿ ಕೋರ್ಟ್ ಆವರಣದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆಗೀಡಾದ ತಮ್ಮ ಗ್ಯಾಂಗ್ ಲೀಡರ್ ಜಿತೇಂದರ್ ಮಾನ್ ಅಲಿಯಾಸ್ ಗೋಗಿ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಟಿಲ್ಲು ತಾಜ್ಪುಪ್ರಿಯಾ ಅವರನ್ನು ಕೊಲ್ಲಲು ಯೋಜನೆಯನ್ನು ರೂಪಿಸಿದ 'ಗೋಗಿ ಗ್ಯಾಂಗ್' ನ ನಾಲ್ವರನ್ನು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿದೆ.
![Delh Shootout Case: 'ಟಿಲ್ಲು' ಹತ್ಯೆಗೆ ಸಂಚು ರೂಪಿಸಿದ್ದ 'ಗೋಗಿ ಗ್ಯಾಂಗ್'ನ ನಾಲ್ವರು ಅಂದರ್ Gogi gang](https://etvbharatimages.akamaized.net/etvbharat/prod-images/768-512-13247535-636-13247535-1633255708240.jpg)
ಪ್ರಕರಣ ಸಂಬಂಧ ವಿಚಾರಣೆಯ ಸಮಯದಲ್ಲಿ, ಸದಸ್ಯರು ತಮ್ಮ ತಂಡವು ಟಿಲ್ಲು ಮತ್ತು ಆತನ ತಂಡವನ್ನು ಕೊಲ್ಲಲು ಹೊಂಚು ಹಾಕುತ್ತಿದೆ ಎಂದು ಬಹಿರಂಗಪಡಿಸಿದ್ದು, 'ಗೋಗಿ ಗ್ಯಾಂಗ್' ಟಿಲ್ಲು ಮತ್ತು ಆತನ ಸಹಚರರನ್ನು ಬಿಡುವುದಿಲ್ಲ ಎಂದು ಮೊದಲೇ ಎಚ್ಚರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 24 ರಂದು, ದಿಲ್ಲಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಗ್ಯಾಂಗ್‌ಸ್ಟರ್ ಜಿತೇಂದರ್ ಮನ್ 'ಗೋಗಿ' ಮತ್ತು ಇನ್ನಿಬ್ಬರು ಅಪರಾಧಿಗಳನ್ನು ವಾಯುವ್ಯ ದೆಹಲಿಯ ರೋಹಿಣಿ ನ್ಯಾಯಾಲಯದ ರೂಮ್ ಸಂಖ್ಯೆ 207 ರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆ ಮಾಡಲಾಗಿತ್ತು. ವಕೀಲರ ವೇಷದಲ್ಲಿದ್ದ ಇಬ್ಬರು ವ್ಯಕ್ತಿಗಳು ಜಿತೇಂದ್ರನ ಮೇಲೆ ಗುಂಡಿನ ದಾಳಿ ನಡೆಸಿ ಆತನನ್ನು ಸ್ಥಳದಲ್ಲಿಯೇ ಹತ್ಯೆ ಮಾಡಿದ್ದರು. ಕೂಡಲೇ ಪ್ರತಿ ದಾಳಿ ನಡೆಸಿದ ದೆಹಲಿ ವಿಶೇಷ ಘಟಕದ ಪೊಲೀಸರು ಇಬ್ಬರು ದಾಳಿಕೋರರನ್ನು ಹತ್ಯೆ ಮಾಡಿದ್ದರು. ದಾಳಿಕೋರರನ್ನು ಜಿತೇಂದರನ ವೈರಿ ಗ್ಯಾಂಗ್ ಟಿಲ್ಲು ತಾಜ್ಪುಪ್ರಿಯಾ ಗುಂಪಿಗೆ ಸೇರಿದವರು ಎಂದು ಹೇಳಲಾಗುತ್ತಿದೆ.